ವರದಿ : ದಿನೇಶ್ ರಾಯಪ್ಪನಮಠ
ಕೋಟ: ಭಜನೆ ಹಿಂದೂ ಧರ್ಮದ ಪ್ರತೀಕ ಆ ಮೂಲಕ ಇಂದಿನ ಮಕ್ಕಳಿಗೆ ಭಜನಾ ಸಂಸ್ಕಾರ ನೀಡಬೇಕು ಎಂದು ಕೋಟ ಮಹತೋಭಾರ ಹಿರೇಮಹಾಮಹಾಲಿಂಗೇಶ್ವರ ದೇವಳದ ಅರ್ಚಕ ಕೆ.ಅನಂತಮೂರ್ತಿ ಭಟ್ ಹೇಳಿದ್ದಾರೆ.
ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಅಯ್ಯಪ್ಪ ಭಕ್ತಾವೃಂದ ಕೋಟ ನೇತ್ರತ್ವದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಜನೆಯಲ್ಲಿ ನಾನಾ ರೀತಿಯ ಭಜನೆಗಳಿವೆ ಆದರೆ ಇಂದಿಗೂ ಎಲ್ಲೂ ಕೂಡಾ ಸಂಸ್ಕಾರ ಅಥವಾ ಸಾಹಿತ್ಯಕ್ಕೆ ಲೋಪ ಬಾರದ ರೀತಿಯಲ್ಲಿ ಉಳಿದುಕೊಂಡಿದೆ.ಅದು ನಮ್ಮ ಸಂಸ್ಕ್ರತಿಯ ಪ್ರತೀಕ ಇದನ್ನು ಮುಂದಿನ ಪೀಳಿಗೆಯವರೆಗೆ ಕೊಂಡ್ಯೊಯ್ಯಬೇಕು ಎಂದು ಅಭಿಪ್ರಾಯಪಟ್ಟರು.
ಕೋಟ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಚಂದ್ರ ಪೂಜಾರಿ, ಕೋಟ ಗ್ರಾಪಂ ಸದಸ್ಯ ಸಂತೋಷ ಪ್ರಭು, ಪಂಚವರ್ಣ ಯುವಕ ಮಂಡಲದ ಸ್ಥಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಯ್ಯಪ್ಪ ಭಕ್ತವೃಂದದ ಪ್ರದೀಪ್ ಪೂಜಾರಿ, ಗೋಪಿನಾಥ್ ಕಿಣಿ, ಶಶಿಧರ ಮತ್ತಿತರರು ಉಪಸ್ಥಿತರಿದ್ದರು.
ನಂತರ ಶಾರದಾ ಮಹಿಳಾ ಭಜನಾ ಮಂಡಳಿ ಕದ್ರಿಕಟ್ಟು, ವಿಪ್ರ ಮಹಿಳಾ ಸಂಘ, ಸಾಲಿಗ್ರಾಮ. ಲಕ್ಷ್ಮೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಚೇಂಪಿ, ಅಯ್ಯಪ್ಪ ಸ್ವಾಮಿ ಭಕ್ತ ವೃಂದ,ಹರಿ ಗುರು ಭಜನಾ ಮಂಡಳಿ,ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ಚೇಂಪಿ ಇವರುಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.