ವಾಷಿಂಗ್ಟನ್ : ಜಾಗತಿಕ ಸಂಪತ್ತಿನ ಬೆಳವಣಿಗೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ದೇಶವು ವಿಶ್ವದ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ. ಜಾಗತಿಕ ಮಟ್ಟದ ಆಡಳಿತ ವ್ಯವಸ್ಥಾಪನಾ ಸಲಹಾ ಸಂಸ್ಥೆ ಮೆಕಿನ್ಸೆ & ಕಂಪನಿ ವರದಿ ಪ್ರಕಟಿಸಿರುವ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಜಾಗತಿಕ ನಿವ್ವಳದ ಲಾಭದ ಪೈಕಿ ಚೀನಾ ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ. ಈ ಮೂಲಕ ನಂಬರ್ 1 ಸ್ಥಾನ ಅಲಂಕರಿಸಿದೆ.
ಮೆರಿಕವನ್ನು ಹಿಂದಿಕ್ಕಿರುವ ಚೀನಾ 9000 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. 6,750 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಅಮೆರಿಕ 2 ನೇ ಸ್ಥಾನಕ್ಕೆ ಕುಸಿದಿದೆ.
ಮೆಕೆನ್ಸಿ ಸಂಸ್ಥೆಯು 10 ದೇಶಗಳ ವಾರ್ಷಿಕ ಲೆಕ್ಕಪತ್ರ ಆಧರಿಸಿ ವರದಿಯ ಬಿಡುಗಡೆ ಮಾಡಲಾಗಿದ್ದು, ಚೀನಾ, ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜಾಪನ್, ಮೆಕ್ಸಿಕೊ, ಸ್ವಿಡನ್ ದೇಶಗಳು ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿವೆ.
Advertisement. Scroll to continue reading.
In this article:America, China, Diksoochi news, diksoochi Tv, diksoochi udupi, richest nation
Click to comment