ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇಲ್ಲಿನ ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ ಪುತ್ರ ಅನಿಕೇತ್ ಶೆಣೈ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸುಮಾರು ಎರಡು ವರ್ಷಗಳಿಂದ ತನ್ನ ಶಿರದಲ್ಲಿ ಕೇಶರಾಶಿಯನ್ನು ಉಳಿಸಿಕೊಂಡು ಮಕ್ಕಳ ದಿನಾಚರಣೆ ದಿನದಂದು ವಿಶೇಷವಾಗಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಬೆಂಗಳೂರಿನ ಹೇರ್ ಡೋನೇಶನ್ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಅರ್ಪಣೆ ಮಾಡಿದ್ದಾರೆ. ಇವರ ಈ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.
ತಂದೆಯಂತೆ ಮಗನು ಸಾಮಾಜಿಕ ಕಳಕಳಿ
ತನ್ನ ತಂದೆ ಶ್ರೀಕಾಂತ್ ಶೆಣೈ ಹಾಕಿ ಕೊಟ್ಟ ಸಮಾಜಸೇವೆಯನ್ನು ಮೈಗೂಡಿಸಿಕೊಂಡಿರುವ ಅನಿಕೇತ್ ವಿವಿಧ ಸಂಘಸಂಸ್ಥೆಗಳಲ್ಲಿ ಸೇವಾ ಕೈಂಕರ್ಯದಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಕ್ಲಿನ್ ಕುಂದಾಪುರ, ಶಿರ್ವ ಬಂಟಕಲ್ಲು ರೋಟರ್ಯಾಕ್ಟ್ ಕಾರ್ಯದರ್ಶಿಯಾಗಿ, ಒರ್ವ ರಕ್ತದಾನಿಯಾಗಿ ತನ್ನ ಕಾಲೇಜು ದಿನಗಳಲ್ಲೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಮುಡಿಗೆರಿಸಿಕೊಂಡು ಹಲವು ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಮಕ್ಕಳ ದಿನದಂದು ನಾನು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ನನ್ನ ಕೂದಲನ್ನು ದಾನ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ! ಮಕ್ಕಳೊಂದಿಗೆ ನಿಂತು ಬೋಳು ಸರಿ ಎಂದು ಹೇಳೋಣ ಎಂದುಕೊಂಡೆ. ನೀವು ಒಬ್ಬಂಟಿಯಾಗಿಲ್ಲ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನಿಮ್ಮ ದಾರಿಯಲ್ಲಿ ಪ್ರೀತಿ ತುಂಬಿದೆ ಎಂದು ಅವರಿಗೆ ಭರವಸೆ ನೀಡುವ ಜೊತೆಗೆ ಕೈಜೋಡಿಸಿದ ಧನ್ಯತೆ ಇದೆ.ಅನಿಕೇತ್ ಶೆಣೈ ಕೋಟ