Connect with us

Hi, what are you looking for?

Diksoochi News

Uncategorized

ಎಲ್ಲಾ ಬಗೆಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಬಿಡಿ

0

ನವದೆಹಲಿ: ಎಬಿಡಿ ವಿಲಿಯರ್ಸ್ ಕ್ರಿಕೆಟ್ ನ ಎಲ್ಲಾ ಪ್ರಕಾರದ ಆಟಕ್ಕೂ ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ಈ ವೇಳೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಡನಾಟವನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.

ಅವರು 114 ಟೆಸ್ಟ್ ಗಳು, 228 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ಪ್ರೋಟೀಸ್ ಪರ ಆಡಿದ್ದಾರೆ. 2011 ರಲ್ಲಿ ಆರ್ ಸಿಬಿ ಪರವಾಗಿ ILP ವೃತ್ತಿಜೀವನವನ್ನು ಪ್ರಾರಂಭಿಸಿದ ಎಬಿ ಡಿ ವಿಲಿಯರ್ಸ್ 10 ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರವಾಗಿ ಆಟವಾಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 17 ವರ್ಷಗಳ ವೃತ್ತಿಜೀವನವನ್ನು ಕೊನೆಗೊಳಿಸುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

Advertisement. Scroll to continue reading.

‘ಇದು ನಂಬಲಾಗದ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನ್ನ ಅಣ್ಣಂದಿರೊಂದಿಗೆ ಹಿತ್ತಲಲ್ಲಿ ಆಡುತ್ತಿದ್ದಾಗಿನಿಂದಲೂ ನಾನು ಶುದ್ಧ ಆನಂದ ಮತ್ತು ಅನಿರ್ಬಂಧಿತ ಉತ್ಸಾಹದಿಂದ ಆಡಿದ್ದೇನೆ. ಈಗ, ತನ್ನ 37ನೇ ವಯಸ್ಸಿನಲ್ಲಿ, ಈ ಜ್ವಾಲೆಯು ಇನ್ನು ಮುಂದೆ ಅಷ್ಟು ಪ್ರಕಾಶಮಾನವಾಗಿ ಉರಿಯದು ಎಂದು ತಿಳಿಸಿದ್ದಾರೆ. ಜೊತೆಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕೊನೆಯದಾಗಿ, ನನ್ನ ಕುಟುಂಬ - ನನ್ನ ಹೆತ್ತವರು, ನನ್ನ ಸಹೋದರರು, ನನ್ನ ಹೆಂಡತಿ ಡೇನಿಯಲ್ ಮತ್ತು ನನ್ನ ಮಕ್ಕಳು ಮಾಡಿದ ತ್ಯಾಗವಿಲ್ಲದೆ ಏನೂ ಸಾಧ್ಯವಾಗುತ್ತಿರಲಿಲ್ಲ ಎಂದು ನನಗೆ ತಿಳಿದಿದೆ. ನಾನು ನಮ್ಮ ಜೀವನದ ಮುಂದಿನ ಅಧ್ಯಾಯವನ್ನು ಎದುರುನೋಡುತ್ತಿದ್ದೇನೆ, ಆಗ ನಾನು ಅವರಿಗೆ ನಿಜವಾಗಿಯೂ ಮೊದಲ ಸ್ಥಾನ ನೀಡಬಹುದು ಎಂದು ಟ್ವೀಟ್ ಮಾಡುವ ಮೂಲಕ ಮುಂದೆ ಕುಟುಂಬದೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!