Connect with us

Hi, what are you looking for?

Diksoochi News

Uncategorized

ಜೀವನ ಪರ್ಯಂತ ಆರ್ ಸಿಬಿಯನ್ ಆಗಿರಲಿದ್ದೇನೆ : ಎಬಿಡಿ ವಿಲಿಯರ್ಸ್

0

ಕ್ರೀಡೆ : ಎಲ್ಲಾ ಬಗೆಯ ಕ್ರಿಕೆಟ್ ಗೆ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ನಿವೃತ್ತಿ ಘೋಷಿಸಿದ್ದಾರೆ. ಆರ್ ಸಿ ಬಿ ತಂಡವನ್ನು ಅವರು ನೆನೆಸಿಕೊಂಡು ಭಾವುಕನಾಗಿ ಮಾತನಾಡಿದ್ದಾರೆ.

ತಾನು ಆರ್ ಸಿಬಿ ಪರ ಬಹಳ ಸಮಯ ಆಡಿದ್ದು 11 ವರ್ಷಗಳು ಕಳೆದಿವೆ. ಹಾಗೆಯೇ ಇದೀಗ ಈ ತಂಡವನ್ನು ತೊರೆಯುವುದು ಕಷ್ಟವಾಗ್ತಿದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ತುಂಬಾ ಸಮಯ ಹಿಡಿಯಿತು. ಆದರೆ, ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಳ್ಳಲೇ ಬೇಕಾಗಿದ್ದು, ಆರ್ ಸಿಬಿ ಮ್ಯಾನೇಜ್ ಮೆಂಟ್, ನನ್ನ ಸ್ನೇಹಿತ ವಿರಾಟ್ ಕೊಹ್ಲಿ, ಸಹ ಆಟಗಾರರು, ತರಬೇತುದಾರರು, ಅರೆವೈದ್ಯಕೀಯ ಸಿಬ್ಬಂದಿ, ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆರ್ ಸಿಬಿ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತೆ ಮತ್ತು ಯಾವಾಗ್ಲೂ ಈ ತಂಡವನ್ನ ಪ್ರೋತ್ಸಾಹಿಸುತ್ತೇನೆ’ ಎಂದು ನುಡಿದಿದ್ದಾರೆ.

‘ನಾನು ಜೀವನಪರ್ಯಂತ ಆರ್ ಸಿಬಿಯನ್ ಆಗಲಿದ್ದೇನೆ. ಆರ್ ಸಿಬಿ ತಂಡದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಕುಟುಂಬವಾಗಿ ಮಾರ್ಪಟ್ಟಿದ್ದಾನೆ. ಜನರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ, ಆರ್ ಸಿಬಿಯಲ್ಲಿ ನಾವು ಪರಸ್ಪರ ಹೊಂದಿರುವಂತಹ ಉತ್ಸಾಹ ಮತ್ತು ಪ್ರೀತಿ ಯಾವಾಗಲೂ ಉಳಿಯುತ್ತೆ. ನಾನು ಈಗ ಅರ್ಧ ಭಾರತೀಯ, ಅರ್ಧ ಸೌತ್ ಆಫ್ರಿಕನ್ ಆಗಿದ್ದೇನೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತದ ಬಗ್ಗೆ ನನ್ನಲ್ಲಿ ವಿಶೇಷ ಸ್ಥಾನವಿದೆ’ ಎಂದಿದ್ದಾರೆ. ಈ ಮಾತು ಅಭಿಮಾನಿಗಳನ್ನು ಭಾವುಕರನ್ನಾಗಿದೆ.

Advertisement. Scroll to continue reading.

ಭಾರತದಲ್ಲೀ ಅಪಾರ ಅಭಿಮಾನಿಗಳನ್ನು ಹೊಂದಿರುವ ಎಬಿಡಿ ಇಂದು ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2011 ರಲ್ಲಿ ಆರ್ ಸಿಬಿ ಪರವಾಗಿ ILP ವೃತ್ತಿಜೀವನವನ್ನು ಪ್ರಾರಂಭಿಸಿದ ಎಬಿ ಡಿ ವಿಲಿಯರ್ಸ್ 10 ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರವಾಗಿ ಆಟವಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!