ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಂಗಳೂರು-ಮುಂಬಯಿ ಮತ್ಸ್ಯಗಂಧ ರೈಲು ಹಾಗೂ ಬೆಂಗಳೂರು- ಕಾರವಾರ ವೆಸ್ಟೋಡಾಮ್ ರೈಲನ್ನು ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅಗ್ರಹಿಸಿ ಬಾರಕೂರು ಪರಿಸರದ ನಾನಾ ದೇವಸ್ಥಾನಗಳ ಮೋಕ್ತೇಸರರು ಸಂಘಸಂಸ್ಥೆಗಳು,ಹಿರಿಯ ನಾಗರೀಕರು,ಉದ್ಯಮಿಗಳು, ಸ್ಥಳೀಯ ಜನಪ್ರತಿನಿಧಿಗಳ ಸಮಾಲೋಚನಾ ಸಭೆಯು ಸೋಮವಾರ ಸಂಜೆ 5 ಗಂಟೆಗೆ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಜರುಗಲಿದೆ .
ಬಾರಕೂರು ಗ್ರಾಮಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದು , ಈ ಹಿಂದೆ ಮಂಗಳೂರು-ಮುಂಬಯಿ ಮತ್ಸ್ಯಗಂಧ ರೈಲು ಹಾಗೂ ಬೆಂಗಳೂರು- ಕಾರವಾರ ರೈಲು ನಿಲುಗಡೆ ಮಾಡಲು ರೈಲ್ ರಖೋ ಚಳುವಳಿ ಮಾಡಿದ ಪರಿಣಾಮ ಬಾರಕೂರಿನಲ್ಲಿ ನಿಲುಗಡೆಗೊಂಡಿದ್ದು, ಕೋರೋನ ಅವಧಿಯಲ್ಲಿ ಪ್ರಯಾಣಿಕರ ಕೊರತೆಯಿಂದ ನಿಲುಗಡೆ ಇಲ್ಲವಾಗಿತ್ತು.
ಬಾರಕೂರಿನಲ್ಲಿ ರೈಲು ನಿಲುಗಡೆಯಾಗುವುದರಿಂದ ಇಲ್ಲಿಂದ ಸಾಲಿಗ್ರಾಮ, ಬ್ರಹ್ಮಾವರ, ಹೆಬ್ರಿ, ಮಂದಾರ್ತಿ ಸೇರಿದಂತೆ ಅನೇಕ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು.
ಕುಂದಾಪುರ ಅಥವಾ ಉಡುಪಿಯಿಂದ ದುಬಾರಿ ಬಾಡಿಗೆ ನೀಡಿ ಅಟೋ ಅಥವಾ ಕಾರಿನಿಂದ ಬರಬೇಕಾಗಿದ್ದು ದೇವಾಲಯಗಳ ನಗರ ಬಾರಕೂರು ಪ್ರವಾಸಿ ಕೇಂದ್ರದ ಜೊತೆ ಅನೇಕ ಶಿಕ್ಷಣ ಸಂಸ್ಥೆ ಇರುವುದರಿಂದ ರೈಲುನಿಲುಗಡೆ ಅತೀ ಮಹತ್ವವಾಗಿದ್ದು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತೆ ಯುವ ಮುಂದಾಳು ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಕೋರಿದ್ದಾರೆ.