ವರದಿ : ಬಿ.ಎಸ್.ಆಚಾರ್ಯ
ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರಕಾರ ಹಾಗೂ ನಮ್ಮ ಟಿವಿ ಇವರ ಆಶ್ರಯದಲ್ಲಿ ನಡೆದ ಬಲೇ ತೆಲಿಪಾಲೆ ಮಾದರಿಯ ಕೊಂಕಣಿ ಹಾಸ್ಯ ನಾಟಕ ಸ್ಪರ್ಧೆ ಯೆಯಾ ಹಾಸೊಯಾ – ಸೀಸನ್ 2 ಸ್ಪರ್ಧೆಯಲ್ಲಿ ಬ್ರಹ್ಮಾವರದ ಆಲ್ವಿನ್ ಅಂದ್ರಾದೆ ತಂಡ ಪ್ರಥಮ ಬಹುಮಾನ ಒಂದು ಲಕ್ಷ ನಗದು ಹಾಗೂ ಚಿನ್ನದ ಟ್ರೋಫಿಯನ್ನು ಪಡೆದಿದೆ.
ಮಂಗಳೂರು ಪುರಭವನದಲ್ಲಿ ಕಳೆದ 9 ತಿಂಗಳ ಹಿಂದೆ ಪ್ರಾರಂಭಗೊಂಡ ಈ ಸ್ಪರ್ಧೆ ಹಲವು ಸುತ್ತು ನಡೆದು ಎಲ್ಲಾ ಸುತ್ತುಗಳಲ್ಲೂ ಇವರ ತಂಡ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದು ಅಂತಿಮವಾಗಿ ಗೆಲುವನ್ನು ಕಂಡಿದೆ.
ಆಲ್ವಿನ್ ಅಂದ್ರಾದೆ, ಸುಜಾತ ಅಂದ್ರಾದೆ, ಸ್ಟೀವನ್ ಲುವಿಸ್ ಮಟಪಾಡಿ, ಆಶೀಶ್ ಅಂದ್ರಾದೆ ಹಾಗೂ ಸಂಗೀತಗಾರ ಅವಿನಾಶ್ ಉಳ್ಳೂರ್ ಒಳಗೊಂಡ ತಂಡಕ್ಕೆ ಸುಜಾತಾ ಅಂದ್ರಾದೆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಹಾಗೂ ಇದೇ ತಂಡದ ಹಿನ್ನಲೆ ಸಂಗೀತಕ್ಕಾಗಿ ಶ್ರೇಷ್ಠ ಹಿನ್ನಲೆ ಸಂಗೀತಗಾರ ಪ್ರಶಸ್ತಿಯನ್ನು ಅವಿನಾಶ್ ಉಳ್ಳೂರ್ ಪಡೆದುಕೊಂಡಿದ್ದಾರೆ,
ಕಾಸರಗೋಡು ಚಿನ್ನಾ, ಸ್ಟಾನಿ ಅಲ್ವಾರಿಸ್, ಓಂ ಗಣೇಶ್, ಸಂಧ್ಯಾ , ಡೊಲ್ಲ ಮಂಗಳೂರು, ಕ್ಯಾಥರಿನ್ ಕಟಪಾಡಿ ತೀರ್ಪುಗಾರರಾಗಿದ್ದರು.
ಕೊಂಕಣಿ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ್ ಶೆಣೈ, ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೇಲಿನೋ, ನಮ್ಮ ಟಿವಿ ಮುಖ್ಯಸ್ಥ ನಾಗೇಂದ್ರ, ಅಕಾಡಮಿ ಸದಸ್ಯ ಅರುಣ್ ಜಿ. ಶೇಟ್ ಬಹುಮಾನ ವಿತರಣಾ ಸಮಾರಂಭದಲ್ಲಿದ್ದರು.