ಉಡುಪಿ : ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಕನ್ನಡದ ಸುದ್ದಿಗಳು ಹೆಚ್ಚು ಬಂದರೆ, ಕನ್ನಡಿಗರ ಬೇಡಿಕೆಗಳಿಗೆ ಒಕ್ಕೂಟ ಸರಕಾರದ ಮನ್ನಣೆ ಸಿಗುತ್ತದೆ. ಧರಣಿ, ಸತ್ಯಾಗ್ರಹಗಳು ಜನರಿಗೆ ಸೌಲಭ್ಯ ಒದಗಿಸಲು ಸಹಾಯ ಮಾಡುತ್ತವೆ
ಎಂದು ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ ಸಾಮಗ ಮಲ್ಪೆ ತಿಳಿಸಿದರು.
ಅವರು ರಥ ಬೀದಿ ಗೆಳೆಯರು ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಏರ್ಪಡಿಸಿದ್ದ ಮಾತು ಕತೆ ಕಾರ್ಯಕ್ರಮ ದಲ್ಲಿ ಉತ್ತರ ಭಾರತದ ಹಲವು ನಗರ ಗಳಲ್ಲಿ ತಾನು ಏರ್ಪಡಿಸಿದ್ದ ಕನ್ನಡ ತುಳು ಸಾಹಿತ್ಯ ಸಮ್ಮೇಳನಗಳ ಸ್ವಾರಸ್ಯ ದ ಅನುಭವಗಳನ್ನು ವಿವರಿಸಿದರು. ಸ್ವಾತಂತ್ರ್ಯ ಹೋರಾಟ ಗಾರ ಆಗಿದ್ದ ಯಕ್ಷಗಾನ ಕಲಾವಿದ ಮಲ್ಪೆ ಶಂಕರ ನಾರಾಯಣ ಸಾಮಗರ ಸಾಧನೆಗಳ ದಾಖಲೀಕರಣ ಆಗಬೇಕು ಎಂದು ಬಾ ಸಾಮಗ ವಿವರಿಸಿದರು.
ಇದೇ ಸಮಾರಂಭದಲ್ಲಿ ಲಾಕ್ ಡೌನ್ ದಿನಗಳಲ್ಲಿ ಮಲ್ಪೆ ಯಲ್ಲಿ ಅನ್ನ ದಾನ ಮಾಡಿದ ಮಲ್ಪೆ ಶಾರದಕ್ಕ ಅವರನ್ನು ಸನ್ಮಾನಿಸಲಾಯಿತು.
ಮುರಳೀಧರ ಉಪಾಧ್ಯ, ನರಸಿಂಹ ಮೂರ್ತಿ, ವಿಶ್ವನಾಥ ಶೆಣೈ, ರಾಘವೇಂದ್ರ ರಾವ್ ಸಂವಾದದಲ್ಲಿ
ಭಾಗವಹಿಸಿದ್ದರು. ಪ್ರೊ. ಸುಬ್ರಮಣ್ಯ ಜೋಶಿ ಸ್ವಾಗತಿಸಿ, ಜಿ. ಪಿ. ಪ್ರಭಾಕರ ಧನ್ಯವಾದ ಸಲ್ಲಿಸಿದರು.