Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ: ಮಟ್ಕಾ ಜುಗಾರಿ ನಿರತ ವ್ಯಕ್ತಿಯ ಬಂಧನ

3

ವರದಿ : ಶ್ರೀದತ್ತ ಹೆಬ್ರಿ


ಹೆಬ್ರಿ: ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಉಡುಪಿ ಉಪ್ಪೂರಿನ ನಿವಾಸಿ ಇಪ್ಪತ್ತಾರು ವರ್ಷ ಪ್ರಾಯದ ಪ್ರಮೋದ್ ಬಂಧಿತ ಆರೋಪಿ .
ಶನಿವಾರ ಹೆಬ್ರಿ ತಾಣದ ರಸ್ತೆಯ ಬದಿಯಲ್ಲಿರುವ ಅಶ್ವತ್ಥಮರದ ಕಟ್ಟೆಯ ಬದಿಯಲ್ಲೇ ಆರೋಪಿ ಪ್ರಮೋದ್ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು, ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸಾವಿರದ ಇನ್ನೂರೈವತ್ತು ರೂ. ನಗದು, ಮಟ್ಕಾ ನಂಬರ್ ಬರೆದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!