ಬೆಂಗಳೂರು : ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಮತ್ತು ಒಮಿಕ್ರಾನ್ ಸೋಂಕು ತಡೆಗೆ ವಾರದೊಳಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ
ರಾಜ್ಯಕ್ಕೆ ಓಮಿಕ್ರಾನ್ ಕಾಲಿಟ್ಟಿರುವ ಹಿನ್ನೆಲೆ ಇಂದು ಆರೋಗ್ಯಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ ಸುಧಾಕರ್ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ಒಮಿಕ್ರಾನ್ ಈಗಾಗಲೇ ಪತ್ತೆಯಾಗಿದೆ. ಹಾಗಾಗಿ ಸಭೆ ನಡೆಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಚಿಕಿತ್ಸೆಗಾಗಿ ಪೊಲೀಸರ ಮುಖಾಂತರ ಸೋಂಕಿತರನ್ನು ಪತ್ತೆ ಹಚ್ಚಲಾಗುವುದು ಎಂದರು.
ರಾಜ್ಯದಲ್ಲಿ ಕೊರನಾ 3 ನೇ ಅಲೆ ಮತ್ತು ಒಮಿಕ್ರಾನ್ ತಡೆಗೆ ವಾರದೊಳಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ರಾಜ್ಯದ 21 ಜಿಲ್ಲೆಗಳಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವುದಕ್ಕೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.
ಒಮಿಕ್ರಾನ್ ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ತಜ್ಞರ ಜೊತೆಗೆ ಚರ್ಚೆ ನಡೆಸಲಾಗಿದೆ. ವಿಶೇಷ ವಾರ್ಡ್ ನಲ್ಲಿ ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುರಿತು ಚರ್ಚೆ ನಡೆಸಲಾಗಿದೆ. ಡೆಲ್ಟಾ ವೈರಸ್ ಮತ್ತು ಒಮಿಕ್ರಾನ್ ವೈರಸ್ ಗೆ ಒಟ್ಟಿಗೆ ಚಿಕಿತ್ಸೆ ನೀಡಬೇಕಾ ಅಥವಾ ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಬೇಕಾ, ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಬೇಕಾ ಎಂದು ಚರ್ಚೆ ನಡೆಸಲಾಗಿದೆ ಎಂದರು.
21 ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜೊತೆ ಸಭೆ ನಡೆಸಲಾಗಿದೆ. ಸೋಂಕಿತರು ಯಾವುದೇ ವಿಚಾರ ಮುಚ್ಚಿಡಬೇಡಿ. ಸರ್ಕಾರ ನಿಮ್ಮ ಸೇವೆಗೆ ಸದಾ ಸಿದ್ಧವಿರಲಿದೆ ಎಂದರು.