ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಾಸ್ತು ಶಾಸ್ತ್ರ ಮತ್ತು ಸಮಾಜ ಸೇವೆಯ ನೆಲೆಯಲ್ಲಿ ಬ್ರಹ್ಮಾವರ ಚಾಂತಾರಿನ ಅನಂತ್ ನಾಯ್ಕ್ ರ ಸಾಧನೆಯನ್ನು ಗುರುತಿಸಿ ದೆಹಲಿಯ ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ.
ತಮಿಳುನಾಡು ಹೊಸೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ರಂಗದ ಖ್ಯಾತ ನಟಿ ಡಾ. ಸುಧಾರಾಣಿಯವರಿಂದ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ, ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಮತ್ತು ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್‍ನ ಅಧ್ಯಕ್ಷ ಡಾ, ಎಭ್‍ನಜರ್, ಉಪಾಧ್ಯಕ್ಷ ಡಾ ಪ್ರಭಾಕರ್, ತಮಿಳುನಾಡು ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷ ಡಾ ಮನೋಹರನ್, ನಿವೃತ್ತ ಸಹಾಯಕ ನ್ಯಾಯಾಧೀಶ ಹರಿದೋಸ್ , ನಾಟ್ಯ ಸಂಪದ ನಿರ್ದೇಶಕ ಮಾನಸ ಕಾಂತಿ, ಕಲಾತ್ಮಕ ನಿರ್ದೇಶಕರಾದ ಪದ್ಮಿನಿ , ಗಂಗಮ್ಮ ದೇವಿ ಶಕ್ತಿ ಪೀಠದ ಡಾ.ರವಿಚಂದ್ರನ್ ಉಪಸ್ಥಿತರಿದ್ದರು.
ಬ್ರಹ್ಮಾವರದಲ್ಲಿ ಹಲವಾರು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ನೊಂದವರಿಗೆ ನೀಡುವ ನಿಷ್ಕಲ್ಮಶ ಮನದ ಸೇವೆಯೇ ದೇವರ ಸೇವೆ ಎಂಬ ಮಾತನ್ನು ಅಕ್ಷರಶ: ಪಾಲಿಸಿಕೊಂಡು ಬಂದ ಇವರು, ಅನೇಕ ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ನೆರವು, ಬಡ ಕುಟುಂಬಗಳಿಗೆ ಮನೆಯ ವಾಸ್ತುವನ್ನು ಉಚಿತವಾಗಿ ತಿಳಿಸಿರುವುದಲ್ಲದೇ, ಕೊರೋನಾ ಸಾಂಕ್ರಾಮಿಕ ಕಾಯಿಲೆ ದೇಶದೆಲ್ಲೆಡೆ ಹರಡಿರುವ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಮತ್ತು ಅನೇಕ ನಿರಾಶ್ರಿತ ಜನರ ಹಸಿವ ನೀಗಿಸಲು ನಿತ್ಯ ಊಟದ ವ್ಯವಸ್ಥೆ ಮತ್ತು ಅಗಲಿದ ದೇಹಗಳ ಅಂತ್ಯ ಕ್ರಿಯೆಗೆ ಅಗತ್ಯ ನೆರವು ನೀಡಿರುವ ಅನಂತ ನಾಯ್ಕ್ ವಾಸ್ತು ಶಾಸ್ತ್ರದ ಕ್ಷೇತ್ರದಲ್ಲಿ ಕರ್ನಾಟಕ ಮಾತ್ರವಲ್ಲದೇ, ಇತರ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲೂ ಪ್ರಸಿದ್ಧಿ ಪಡೆದು ವಾಸ್ತು ಜೊತೆ ಜಲ ತಜ್ಞರಾಗಿ , ರೇಖಿ ಮಾಸ್ಟರ್ ಆಗಿ ನಾಟಿ ವೈದ್ಯರಾಗಿ ಕೂಡಾ ಜನರೊಂದಿಗಿದ್ದಾರೆ.