ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಕಾಲಿಟ್ಟ ನಂತರ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ಹೆಚ್ಚಾದ್ರೆ ಶಾಲೆ ಬಂದ್ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ರಾಜ್ಯದಲ್ಲಿನ ಕೊರೋನಾ ಸೋಂಕಿನ ತೀವ್ರತೆ ಬಗ್ಗೆ ತಜ್ಞರಿಂದ ಪ್ರತಿ ದಿನ ವರದಿಯನ್ನು ಪಡೆಯುತ್ತಿದ್ದೇವೆ. ಕೋವಿಡ್ ತೀವ್ರತೆಯನ್ನು ಆಧರಿಸಿ, ಶಾಲಾ-ಕಾಲೇಜು ಮುಚ್ಚುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ತಜ್ಞರು ನೀಡುತ್ತಿರುವಂತ ವರದಿಯ ಪ್ರಕಾರ ಯಾರೂ ಆತಂಕ ಪಡುವಂತೆ ಕೊರೋನಾ ತೀವ್ರತೆ ಇಲ್ಲ. ಕೊರೋನಾ ತೀವ್ರತೆ ಆಧರಿಸಿ, ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಯವರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾ ತೀವ್ರತೆ ಇಲ್ಲ. ಪೋಷಕರು ಆತಂಕ ಪಡಬಾರದು ಎಂದು ಅವರು ಹೇಳಿದ್ದಾರೆ
Advertisement. Scroll to continue reading.
In this article:BC nagesh, Covid 19, Diksoochi news, diksoochi Tv, diksoochi udupi, Omicron Variant, schools
Click to comment