ದೆಹಲಿ : ಇಂದು ಭಾರತಕ್ಕೆ ಕರಾಳ ದಿನ. ತಮಿಳು ನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮೃತಪಟ್ಟಿದ್ದಾರೆ. ಅವರ ಪತ್ನಿ ಮಧುಲಿಕಾ ರಾವತ್ ಕೂಡಾ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಕ್ಯಾ.ವರುಣ್ ಸಿಂಗ್ ಬದುಕುಳಿದಿದ್ದಾರೆ.
ಸೇನಾ ಅಧಿಕಾರಿಗಳು ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಮೂಲಕ ಸೂಳೂರಿನ ವೆಲ್ಲಿಂಗ್ಟನ್ ಗೆ ಹೋಗುತ್ತಿದ್ದರು.
ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಹಾಗೂ ಅಧಿಕಾರಿಗಳಾದಂತ ಗುರುಸೇವಕ್ ಸಿಂಗ್, ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಸಾಯಿತೇಜಾ, ಸಾತ್ಪಾಲ್ ಸೇರಿದಂತೆ ಒಟ್ಟು 14 ಜನರು ಪ್ರಯಾಣಿಸುತ್ತಿದ್ದರು. ವೆಲ್ಲಿಂಗ್ಟನ್ ಮಿಲಿಟರಿ ಕಾಲೇಜು ತಲುಪಲು 10 ನಿಮಿಷ ಇದ್ದಾಗ ಪತನಗೊಂಡಿದೆ. ಲ್ಯಾಂಡಿಂಗ್ ಗೆ 5 ನಿಮಿಷ ಇರುವಾಗ ಸ್ಪೋಟಗೊಂಡು, ಎರಡು ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.