Connect with us

Hi, what are you looking for?

Diksoochi News

ರಾಜ್ಯ

ಒಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಬಗ್ಗೆ ಮಾರ್ಗಸೂಚಿ ಪ್ರಕಟ

2

ಬೆಂಗಳೂರು : ಒಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಬಗ್ಗೆ ಕ್ಲಿನಿಕಲ್ ಎಕ್ಸ್ ಪರ್ಟ್ ಕಮಿಟಿಯಿಂದ ಮಾರ್ಗಸೂಚಿ ಪ್ರಕಟವಾಗಿದೆ. ರೋಗಲಕ್ಷಣ ಇಲ್ಲದಿದ್ದರೆ 10 ದಿನಕ್ಕೆ ಡಿಸ್ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ಒಮಿಕ್ರಾನ್ ಸೋಂಕಿತ ರೋಗಿಗಳನ್ನು ರೋಗ ಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ನಂತರ ಡಿಸ್ಚಾರ್ಜ್ ಮಾಡಬಹುದು. 10 ನೇ ದಿನಕ್ಕೆ ಡಿಸ್ಚಾರ್ಜ್ ಮಾಡಲು ಕೆಲ ಅಂಶಗಳನ್ನು ಪರಿಗಣಿಸಬೇಕು.

ಕೊನೆ ಮೂರು ದಿನದಲ್ಲಿ ಜ್ವರ ಲಕ್ಷಣವಿಲ್ಲದಿದ್ದರೆ ಡಿಸ್ಚಾರ್ಜ್ ಮಾಡಲಾಗುವುದು. ಕೊನೆ 4 ದಿನಕ್ಕೆ ಆಕ್ಸಿಜನ್ ಲೆವೆಲ್ ಶೇ. 95 ರಷ್ಟಿದ್ದರೆ, 2 ಬಾರಿ RTPCR ಟೆಸ್ಟ್ ಮಾಡಿ ನೆಗೆಟಿವ್ ಇದ್ದರಷ್ಟೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. RTPCR ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಮತ್ತೊಮ್ಮೆ RTPCR ಟೆಸ್ಟ್ ಮಾಡಿಸಬೇಕು ಎಂದು ಹೇಳಲಾಗಿದೆ. 48 ಗಂಟೆಗಳ ಬಳಿಕ ಮತ್ತೆ RTPCR ಟೆಸ್ಟ್ ಮಾಡಬೇಕು.

Advertisement. Scroll to continue reading.

ಡಿಸ್ಚಾರ್ಜ್ ಆದ ವ್ಯಕ್ತಿಗೆ ಹೋಮ್ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಬೇಕು. ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗೆ ಮತ್ತೆ 6 ನೇ ದಿನಕ್ಕೆ RTPCR ಟೆಸ್ಟ್ ಮಾಡಿಸಬೇಕು ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!