ವರದಿ : ಬಿ.ಎಸ್.ಆಚಾರ್ಯ
ನೀಲಾವರ ಯಕ್ಷಗಾನ ಮೇಳದಲ್ಲಿ ಈ ವರ್ಷದಲ್ಲಿ ಪ್ರದರ್ಶನ ಕಂಡ ಮಹಾಸ್ವಾಮಿ ಕೊರಗಜ್ಜ ಯಕ್ಷಗಾನ ಪ್ರಸಂಗದಲ್ಲಿ ಭಗವಾನ್ ಬಬ್ಬುಸ್ವಾಮಿಯನ್ನು ಕಥೆಯಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಮುಂಡಾಳ ಸಮಾಜ ತೀರ್ವ ಆಕ್ಷೇಪ ವ್ಯಕ್ತ ಪಡಿಸಿ ಸಮಾಜ ಉಘ್ರ ಪ್ರತಿಭಟನೆ ಮಾಡುವ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆ ಕಥೆಯ ಯಕ್ಷಗಾನ ಪ್ರದರ್ಶನ ಗೊಳ್ಳಬಾರದು ಮತ್ತು ಕಥೆಯನ್ನು ಬರೆದವರು ಬಾರಕೂರು ಕಚ್ಚೂರು ಬಬ್ಬು ಸ್ವಾಮಿ ಮೂಲಕ್ಷೇತ್ರದಲ್ಲಿ ದೇವರಲ್ಲಿ ಕ್ಷಮೆ ಯಾಚಿಸ ಬೇಕು ಎಂದು ಒತ್ತಾಯಿಸಲಾಗಿತ್ತು.
ಅದರಂತೆ ಶನಿವಾರ ಕಚ್ಚೂರು ಕ್ಷೇತ್ರಕ್ಕೆ ಕಥೆಯನ್ನು ಬರೆದ ರಮೇಶ್ ಕುಲಾಲ್ ಹಂದಿಗದ್ದೆ ಮತ್ತು ಮೇಳದ ಸಂಚಾಕರಾದ ಸುಧೀರ್ ಕುಮಾರ್ ಶೆಟ್ಟಿ , ವ್ಯವಸ್ಥಾಪನಾ ಸಮಿತಿಯ ಸದಸ್ಯ ರಮೇಶ್ ಪೂಜಾರಿಯವರು ಕಚ್ಚೂರಿಗೆ ಆಗಮಿಸಿ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಯಿಮಾಲ್ತೀದೇವಿಯಲ್ಲಿ ಮತ್ತು ಬಬ್ಬುಸ್ವಾಮಿಯಲ್ಲಿ ಕ್ಷಮೆಯಾಚಿಸಿದ್ದಾರೆ.
ಉಡುಪಿ ಜಿಲ್ಲಾ ಮುಂಡಾಲ ಮಹಾ ಸಭಾದ ಅಧ್ಯಕ್ಷ ಶಿವರಾಜ್ ಮಲ್ಲಾರ್ ರಾಜ್ಯದ ಬಹುಮಂದಿಯ ಆರಾಧನಾ ಕೇಂದ್ರ ಮತ್ತು ಕಚ್ಚೂರು ಮಾಲ್ತಿ ದೇವಿ ಮತ್ತು ಭಗನಾನ್ ಬಬ್ಬು ಸ್ವಾಮಿಯ ಕುರಿತು ಮುಂದಿನ ದಿನದಲ್ಲಿ ಇದು ಯಕ್ಷಗಾನವಾಗಿ ಮುಂದುವರಿಯ ಬಾರದು.
ನಂಬಿಕೆ ಪ್ರಧಾನ ಹಿಂದೂ ಧರ್ಮದಲ್ಲಿ ದೇವರನ್ನು ಮತ್ತು ಧರ್ಮವನ್ನು ನಿಂದಿಸುವ ಮತ್ತು ಅವಮಾನಿಸುವುದು ಖಂಡನೀಯ ತಪ್ಪಿನ ಕುರಿತು ದೇವರಲ್ಲಿ ಕ್ಷಮೆ ಯಾಚಿಸಿದಲ್ಲಿ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗುವುದು ಎಂದರು.
ಕಚ್ಚೂರು ಮಾಲ್ತೀ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು ಮಾತನಾಡಿ, ಮನುಷ್ಯ ಸಹಜವಾಗಿ ತಪ್ಪುಮಾಡಿದುದನ್ನು ಒಪ್ಪಿಕೊಳ್ಳುವುದು ದೊಡ್ಡಗುಣ. ಒಂದು ದೇವರು ಮತ್ತು ಸಮಾಜಕ್ಕೆ ಧಕ್ಕೆ ಬರುವಂತ ಕಥೆ ಅಥವಾ ಚರಿತ್ರೆ ಬರೆಯುವ ಮುನ್ನ ಆಳವಾಗಿ ಅಧ್ಯಯನ ಮಾಡಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸ ಬೇಕು ಎಂದರು.
ಕಚ್ಚೂರು ಕ್ಷೇತ್ರದ ಆಡಳಿತ ಮಂಡಳಿಯ ಪಿ ಬಾಬು , ಸಂಜೀವ ಮಾಸ್ಟರ್, ಉದಯ ಅಂಚನ್, ವಾಸುದೇವ್ ಹಂಗಾರಕಟ್ಟೆ , ರವಿರಾಜ್ ಹೆಜಮಾಡಿ, ಮಾಜಿ ಉಡುಪಿ ನಗರ ಸಭಾ ಅಧ್ಯಕ್ಷ ದಿನಕರ ಬಾಬು ಇನ್ನಿತರರು ಉಪಸ್ಥಿತರಿದ್ದರು.