ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಮಹಾತೊಭಾರ ಶ್ರೀಸಿದ್ದಿವಿನಾಯಕ ದೇವಸ್ಥಾನ ಉಪ್ಪೂರು ಇಲ್ಲಿಗೆ ಭಾನುವಾರ ಸಂಜೆ ಶಿಲಾಮಯ 21 ಅಡಿಯ ಧ್ವಜಸ್ಥಂಭ ಪ್ರತಿಷ್ಟಾಪಿಸಲಾಯಿತು.
ಉಡುಪಿ ಸಂತೆಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅರ್ಚಕ ಅನಂತ್ ಭಟ್ ಇವರಿಂದ ಪೂಜೆ ನಡೆದು ಬಳಿಕ ರಾಷ್ಟ್ರೀಯ ಹೆದ್ದಾರಿ 66 ಕಲ್ಯಾಣಪುರ ಮೂಲಕ ಉಪ್ಪೂರಿಗೆ ಮೆರವಣಿಗೆ ಮೂಲಕ ತರಲಾಯಿತು.
ಸ್ವಸಹಾಯ ಸಂಘದ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ತಾಲೀಮು, ಕೊಂಬು, ಕಹಳೆ, ವಾದ್ಯ, ಚಂಡೆ, ಡೋಲು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತ್ತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯ ಸುನೀಲ್ ಶೆಟ್ಟಿ, ಲೋಕೇಶ್ ಜೆ ಮೆಂಡನ್, ರಾಜೇಶ್ ರಾವ್, ದಯಾನಂದ ಕರ್ಕೇರ, ನಾಗವೇಣಿ ವಿಠಲ ಭಂಡಾರಿ, ನಾಗರತ್ನ ಗಣಪತಿ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಅಡಿಗ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಗಣ್ಯರು ಮತ್ತು ಭಕ್ತ ಅಭಿಮಾನಿಗಳು ಪಾಲ್ಗೊಂಡಿದ್ದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಉಡುಪಿ ಶಾಸಕ ಕೆ .ರಘುಪತಿ ಭಟ್ ಇವರಿಂದ ಶಿಲಾನ್ಯಾಸ ಕಾರ್ಯಕ್ರಮ ಜರುಗಿತ್ತು.