ವರದಿ : ದಿನೇಶ್ ರಾಯಪ್ಪನಮಠ
ಕೋಟ: ಹದಿಹರೆಯದಲ್ಲಿ ಮನುಷ್ಯ ಬಾಹ್ಯವಾಗಿ ಹಾಗು ಆಂತರಿಕವಾಗಿ ಪರಿವರ್ತನೆಯ ಹಂತದಲ್ಲಿರುವುದರಿಂದ ಮಾನಸಿಕ ಗೊಂದಲಗಳು ಸಾಮಾನ್ಯವಾಗಿದ್ದು, ಇವುಗಳನ್ನು ಸಮಾಲೋಚನೆಯ ಮೂಲಕ ಪರಿಹರಿಸಿ ಅವರಲ್ಲಿರುವ ಸಮಸ್ಯಗಳನ್ನು ಪರಿಹರಿಸಲು ಸಾದ್ಯ’ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ, ರಾಷ್ಟ್ರೀಯ ಸೇವಾ ಯೋಜನೆ, ತರಬೇತುದಾರರು, ರಂಜಿತ್ ಕುಮಾರ ಶೆಟ್ಟಿ, ತಿಳಿಸಿದರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಆಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ಆಯೋಜಿಸಲಾಗಿದ್ದ ಜೀವನ ಕೌಶಲ್ಯ ತರಭೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಇವರು ಪ್ರತಿಭೆಯನ್ನು ಹೇಗೆ ಅನಾವರಣಗೊಳಿಸಬೇಕೆಂಬುದನ್ನು ತಿಳಿಸಿಕೊಟ್ಟರು.
ಲಯನ್ಸ ಕ್ಲಬ್ ಕುಂದಾಪುರ ಇದರ ಅಧ್ಯಕ್ಷ ರಾಧಾಕೃಷ್ಣ ರೂಪಂ ಇವರು ಕಾರ್ಯಕ್ರಮನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಯಾವುದೇ ಅಸೆ ಆಮಿಷಗಳಿಗೆ ಒಳಗಾಗದೇ ಅಧ್ಯಯನಶೀಲರಾಗಿ, ಈ ಮೂಲಕವಾಗಿ ಸದೃಡ ಸಮಾಜವನ್ನು ನಿರ್ಮಾಣ ಮಾಡುವ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೋ. ಗಣೇಶ ಪೈ ಎಂ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವ ಸ್ಪಂದನ ಕೇಂದ್ರ ಉಡುಪಿ, ಇದರ ಅಧಿಕಾರಿಯಾದ ನರಸಿಂಹ ಗಾಣಿಗ ಇವರು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ನಾಗರಾಜ ಯು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಸಂತೋಷ ನಾಯ್ಕ ಹೆಚ್, ಡಾ. ಗೀತಾ ಎಂ ಹಾಗು ರವಿಚಂದ್ರ ಹೆಚ್. ಎಸ್ ಉಪಸ್ಥಿತರಿದ್ದರು.
ಅನುಷಾ ಸ್ವಾಗತಿಸಿ, ಸ್ವಾತಿ ವಂದಿಸಿದರು. ಕಾರ್ಯಕ್ರಮವನ್ನು ರಂಚಿತಾ ಕೆ. ಮಲ್ಯ ನಿರ್ವಹಿಸಿದರು.