Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕೋವಿಡ್ ಲಸಿಕೆ ಪಡೆಯಲು ಪಂಚ ಭಾಷೆಗಳ ಆಡಿಯೋ, ವೀಡಿಯೋ ಜಿಂಗಲ್ಸ್

1

ಉಡುಪಿ: ಕೋವಿಡ್ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಅರ್ಹ ಎಲ್ಲರೂ ಲಸಿಕೆ ಪಡೆಯುವುದು ಅಗತ್ಯವಾಗಿದ್ದು, ಸಾರ್ವಜನಿಕರು ಲಸಿಕೆ ಪಡೆಯಲು ಪ್ರೇರೇಪಿಸಲು ಉಡುಪಿ ಜಿಲ್ಲಾಡಳಿತ 5 ಭಾಷೆಗಳಲ್ಲಿ ಆಡಿಯೋ ಮತ್ತು ವೀಡಿಯೋ ಜಿಂಗಲ್ಸ್ ಸಿದ್ದಪಡಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುತ್ತಿದೆ.

 ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಬಳಸಿ . ಅರ್ಹರೆಲ್ಲರೂ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದು ಜಿಲ್ಲೆಯು ಶೇ. 100 ಲಸಿಕಾ ಪ್ರಗತಿ ಸಾಧಿಸುವಲ್ಲಿ ಮತ್ತು ಕೋವಿಡ್ ನಿಯಂತ್ರಣ ಮಾಡುವಲ್ಲಿ , ಜಿಲ್ಲೆಯ ಎಲ್ಲಾ ಜನತೆ ಜಿಲ್ಲಾಡಳಿತದ ಜೊತೆ ಕೈ ಜೋಡಿಸುವಂತೆ ಹಾಗೂ ಲಸಿಕೆಯನ್ನು ಪಡೆಯಲು ಪಂಚಭಾಷೆಗಳಲ್ಲಿ ಅಂದರೆ ಸ್ಥಳೀಯ ಭಾಷೆಗಳಾದ ಕನ್ನಡ, ಕುಂದಾಪ್ರ ಕನ್ನಡ, ತುಳು, ಕೊಂಕಣಿ ಮತ್ತು ಉರ್ದುವಿನಲ್ಲಿ ಆಡಿಯೋ ಜಿಂಗಲ್ಸ್ ಮತ್ತು ವೀಡಿಯೋ ಜಿಂಗಲ್ಸ್ಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳು ಸಾಮಾಜಿಕ ಜಾಲತಾಣ  Face Book Id: District Health Society Udupi, Twitter Id :@DhoUdupi ನಲ್ಲಿ ಲಭ್ಯವಿದೆ.

ಕೋವಿಡ್ ಮೂರನೇ ಅಲೆಯು ಬರುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯದೇ ಇದ್ದವರಿಗೆ ಹಾಗೂ ಅವರ ಮನೆಯಲ್ಲಿರುವ ಹಿರಿಯರಿಗೆ ಮತ್ತು ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಕೋವಿಡ್ ಲಸಿಕೆ ಪಡೆಯದೇ ಇರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆಯು ಹತ್ತಿರದ ಸರ್ಕಾರಿ ಆಸ್ಪತ್ರೆ ಹಾಗೂ ನಿಗದಿಪಡಿಸಿದ ಶಿಬಿರಗಳಲ್ಲಿ ಲಭ್ಯವಿದ್ದು, ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದವರು 84 ದಿನಗಳ ನಂತರ ಎರಡನೇ ಡೋಸ್ ಹಾಗೂ ಕೋವ್ಯಾಕ್ಸಿನ್ ಪ್ರಥಮಡೋಸ್ ಪಡೆದವರು 28 ದಿನಗಳ ನಂತರ ಎರಡನೇ ಡೋಸ್ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!