ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಯುವ ಜನಾಂಗ ತಮಗೆ ಅರಿವಿಲ್ಲದಂತೆ ಅಪರಾಧದಲ್ಲಿ ಸಿಲುಕಿಕೊಳ್ಳುವ ವಿದ್ಯಮಾನ ಕೆಲವು ಕಡೆಯಲ್ಲಿ ಕಂಡು ಬಂದಿದೆ. ಅದನ್ನು ನಿಯಂತ್ರಿಸುವ ಹೊಣೆ ಪೊಲೀಸ್ ಇಲಾಖೆಯ ಜೊತೆ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದು ಬ್ರಹ್ಮಾವರ ಪಿಎಸ್ ಐ ಗುರುನಾಥ ಬಿ. ಹಾದಿಮನಿ ಹೇಳಿದರು.
ಮಂಗಳವಾರ ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರಿನಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಅವರು ಮಾತನಾಡಿ, ನಮ್ಮ ಸುತ್ತ ಮುತ್ತ ಚಿನ್ನಾಭರಣ ಕಳವು, ಮನೆಯಲ್ಲಿ ಕಳವು, ಸೈಬರ್ ಕ್ರೈಂ ಮುಂತಾದ ಅನೇಕ ಅಪರಾಧಗಳ ಕುರಿತು ಹಲವಾರು ಮಾಹಿತಿ ನೀಡಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ರಮೇಶ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಉಪನೀರಿಕ್ಷಕರಾದ ಶಾಂತ್‍ರಾಜ್, ನಾರಾಯಣ ಹಾಗೂ ಠಾಣಾ ಸಿಬ್ಬಂದಿಗಳು, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರೊ. ವೀರಣ್ಣ ಕಾರ್ಯಕ್ರಮ ನಿರೂಪಿಸಿದರು.