ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಪ್ರಾಯೋಜಕತ್ವದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ, ಬ್ರಹ್ಮಾವರ ಐ .ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರುಗಳ ಸಹಯೋಗದೊಂದಿಗೆ ಉನ್ನತಿ ಯೋಜನೆಯಡಿಯಲ್ಲಿ ‘ಸಮಗ್ರ ಕೃಷಿ ತರಬೇತಿ ‘ ಸಮಾರೋಪ ಕಾರ್ಯಕ್ರಮ ಕೃಷಿ ಕೇಂದ್ರ ಬ್ರಹ್ಮಾವರದಲ್ಲಿ ಇಂದು ಜರುಗಿತು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 100 ದಿನ ಕೆಲಸ ಪೂರೈಸಿದ ಅಕುಶಲ ಕಾರ್ಮಿಕರ ಕುಟುಂಬಗಳ ಸದಸ್ಯರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉನ್ನತಿ ಯೋಜನೆಯಡಿಯಲ್ಲಿ ಸಮಗ್ರ ಕೃಷಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ ವಿತರಿಸಿ ಶುಭ ಹಾರೈಸಿದರು.
ಡಾ.ಲಕ್ಷ್ಮಣ ಸಹ ಸಂಶೋಧನ ನಿರ್ದೇಶಕ ಕೆ.ವಿ.ಕೆ.ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ಡಾ .ಸುಧೀರ್ ಕಾಮತ್ ಕೆ.ವಿ, ಪ್ರಾಂಶುಪಾಲರು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಡಾ.ಧನಂಜಯ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಕೆ .ವಿ.ಕೆ.ರಾಘವೇಂದ್ರ ಉಪ್ಪೂರು, ನಾಮ ನಿರ್ದೇಶಿತ ಸದಸ್ಯ ಜೇಮ್ಸ್ ಡಿಸಿಲ್ವಾ, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಪ್ರಭಾಕರ ಆಚಾರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಎನ್ .ಆರ್.ಎಲ್ .ಎಂ.ಉಪಸ್ಥಿತರಿದ್ದರು.
ಜಿಲ್ಲಾ ವ್ಯವಸ್ಥಾಪಕಿ ನವ್ಯಾ ನಿರೂಪಿಸಿದರು. ವಿಜ್ಞಾನಿ ಡಾ.ಚೈತನ್ಯ ಹೆಚ್.ಎಸ್ ಸ್ವಾಗತಿಸಿ, ಜಯಮಾಲಾ ವಂದಿಸಿದರು .