ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ವರಂಗ ಸಹಕಾರಿ ವ್ಯವಸಾಯಿಕ ಸಂಘ (ನಿ). ೧೨.೧೨.೧೯೫೬ರಲ್ಲಿ ಸ್ಥಾಪನೆಗೊಂಡಿದ್ದು ವರಂಗ, ಪಡುಕುಡೂರು, ಮುದ್ರಾಡಿ ಮತ್ತು ಕಬ್ಬಿನಾಲೆ ಕಾರ್ಯಕ್ಷೇತ್ರವನ್ನು ಹೊಂದಿದೆ. ಸಂಘಕ್ಕೆ ದಾನವಾಗಿ ನೀಡಿದ ಜಾಗದಲ್ಲಿ ವರಂಗದಲ್ಲಿ ಪ್ರಧಾನ ಕಚೇರಿ ಮತ್ತು ಮುದ್ರಾಡಿ ಹಾಗೂ ಕಬ್ಬಿನಾಲೆಯಲ್ಲಿ ಶಾಖೆಯನ್ನು ಹೊಂದಿದೆ. ಈಗ ಮುನಿಯಾಲಿನಲ್ಲಿ ಕಟ್ಟಡವನ್ನು ಸಂಘವು ಖರೀದಿಸಿದ್ದು ಸುಸಜ್ಜಿತವಾದ ನೂತನ ಶಾಖೆಯು ಇದೇ ೨೪ರಂದು ಉದ್ಘಾಟನೆ ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ ತಿಳಿಸಿದರು.
ಅವರು ಬುಧವಾರ ವರಂಗ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸಂಘದಲ್ಲಿ ವರ್ಷಾಂತ್ಯಕ್ಕೆ ೩೨೬೨ ಎ ತರಗತಿಯ ಸದಸ್ಯರು, ೩೩೬೩ ಸಿ ತರಗತಿ ಹಾಗೂ ೫೦ ಮಂದಿ ಡಿ ತರಗತಿಯ ಸದಸ್ಯರಿದ್ದು ೨,೧೧,೪೦,೧೬೦.೦೦ ಪಾಲು ಬಂಡವಾಳ ಜಮೆ ಇದೆ. ವರ್ಷದ ಅಂತ್ಯಕ್ಕೆ ೨೩,೦೪,೭೫,೬೪೭ ಠೇವಣಿ ಇದ್ದು ೩೯.೩೬ ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪಡೆದ ಹೊರ ಬಾಕಿ ಸಾಲವು ೯,೯೪,೩೫,೦೦೦-೦೦ ಇರುತ್ತದೆ ಎಂದು ಚಂದ್ರಶೇಖರ ಬಾಯರಿ ತಿಳಿಸಿದರು. ಸದಸ್ಯರ ಸಾಲದಲ್ಲಿ ವರ್ಷಾಂತ್ಯಕ್ಕೆ ೧೦,೨೫,೫೬,೦೦೦-೦೦ ರೂಪಾಯಿ ಹೊರಬಾಕಿ ಸಾಲ ಇರುತ್ತದೆ.
ಪಡಿತರ ವಹಿವಾಟು : ವರಂಗ ವರಂಗ ಸಹಕಾರಿ ವ್ಯವಸಾಯಿಕ ಸಂಘ ೩ ಶಾಖೆಯಲ್ಲಿ ವರದಿ ವರ್ಷದಲ್ಲಿ ಪಡಿತರ ವಸ್ತುಗಳ ಮಾರಾಟ ಮಾಡಿ ವ್ಯಾಪಾರ ವಹಿವಾಟು ಸೇವೆ ಮತ್ತು ಪೂರೈಕೆ ವಹಿವಾಟು ನಡೆಸಿ ೩,೭೬,೪೨೨ ವಾರ್ಷಿಕ ವ್ಯಾಪಾರ ಲಾಭ ಮಾಡಿರುತ್ತದೆ.
ವಾರ್ಷಿಕ ಲಾಭ : ವ್ಯಾಪಾರ ವಹಿವಾಟು, ಪಡಿತರ ವಿತರಣೆ, ಸರ್ಕಾರಿ ಸೌಲಭ್ಯ ಸಾಲಗಳ ವಿತರಣೆ ಸೇರಿ ಎಲ್ಲಾ ರೀತಿಯಲ್ಲಿ ೧೧೭,೪೭.,೯೧,೧೮೯.೦೧ ರಷ್ಟು ವಾರ್ಷಿಕ ವ್ಯವಹಾರ ಮಾಡಿ ೩೦,೧೩,೧೬೧.೩೯ ವಾರ್ಷಿಕ ನಿವ್ವಳ ಲಾಭ ಗಳಿಸಿದೆ ಎಂದು ಚಂದ್ರಶೇಖರ ಬಾಯರಿ ಮಾಹಿತಿ ನೀಡಿದರು.
ಸಂಘದಲ್ಲಿ ೯ ಮಂದಿ ಕಾಯಂ ನೌಕರರು ಇದ್ದು ಸದಸ್ಯರಿಗೆ ನಗುಮುಖದ ಸೇವೆ ನೀಡುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಂಘದಲ್ಲಿ ೧೨ ಮಂದಿ ಚುನಾಯಿತ ನಿರ್ದೇಶಕರು, ಹಣಕಾಸು ಬ್ಯಾಂಕಿನ ಪ್ರತಿನಿಧಿ, ವೃತ್ತಿಪರ ನಿರ್ದೇಶಕರು ಸೇರಿ ೧೪ ಮಂದಿ ನಿರ್ದೇಶಕರು ಸೇವೆ ಸಲ್ಲಿಸುತ್ತಿದ್ದು ಸಂಘದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪ್ರತಿವರ್ಷ ೫ ಮಂದಿ ಸಾಧಕ ರೈತರಿಗೆ ಸನ್ಮಾನವನ್ನು ಸಂಘದ ಮೂಲಕ ಮಾಡಲಾಗುತ್ತಿದೆ. ಸಂಘದ ಎಲ್ಲಾ ಶಾಖೆಯನ್ನು ಆನ್ ಲೈನ್ ವ್ಯವಸ್ಥೆಗೊಳಿಸಲು ಸಿದ್ಧತೆ ಗೊಳಿಸಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಯಂತೆ ಅಂಡಾರು ಕಂದಾಯ ಗ್ರಾಮವನ್ನು ವರಂಗ ಸಹಕಾರಿ ಸಂಘದ ವ್ಯಾಪ್ತಿಗೆ ಸೇರಿಸಲು ಒತ್ತಾಯವಿದ್ದು ಸರ್ಕಾರ ನೀಡಿದರೇ ಸಂಘವು ಸೇವೆ ನೀಡಲು ಸಿದ್ಧವಿದೆ. ಮುನಿಯಾಲಿನ ನೂತನ ಶಾಖೆಯಲ್ಲೂ ಪಡಿತರ ವ್ಯವಸ್ಥೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಸಹಕಾರ ಸಂಘಗಳ ವಲಯ ಮೇಲ್ವೀಚಾರಕ ಜಯಂತ್ ಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಗೋಪಾಲಕೃಷ್ಣ ಪೈ, ಉಪಾಧ್ಯಕ್ಷ ಲಕ್ಷ್ಮಣ ಆಚಾರ್ಯ, ನಿರ್ದೇಶಕರಾದ ರವಿ ಪೂಜಾರಿ, ಅಕ್ಷಯ ಕುಮಾರ, ಶುಭದರ ಶೆಟ್ಟಿ, ಕೃಷ್ಣ ಆಚಾರ್ಯ, ಗಣಪತಿ ಎಂ, ಸುಧನ್ವ ಪಾಣಾರ, ಉದಯ ನಾಯ್ಕ್, ಸನತ್‌ಕುಮಾರ್, ಉಷಾ ಎಂ.ಹೆಬ್ಬಾರ್, ಹೇಮಾವತಿ ಉಪಸ್ಥಿತರಿದ್ದರು.