Connect with us

Hi, what are you looking for?

Diksoochi News

ಕರಾವಳಿ

ದಿಕ್ಸೂಚಿ ನ್ಯೂಸ್ ವಿಶೇಷ ವರದಿ : ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡಿದ್ದರೂ ಪ್ರಯೋಜನವಿಲ್ಲ; ಅನೈತಿಕ ಚಟುವಟಿಕೆಗಳ ತಾಣವಾಗಿದೆ ಬ್ರಹ್ಮಾವರ ಗಾಂಧಿ ಮೈದಾನ

3

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ತಾಲೂಕು ಕೇಂದ್ರ ಬ್ರಹ್ಮಾವರದ ಗಾಂಧಿಮೈದಾನ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡ ಬಳಿಕ 75 ಲಕ್ಷ ರೂ ವೆಚ್ಚದಲ್ಲಿ ಕೇವಲ ಆವರಣಗಡೆ ಮಾತ್ರ ಮಾಡಿ ಕೈತೊಳೆದುಕೊಂಡಿದೆ.
ಗಾಂಧಿ ಮೈದಾನ ಸೇನೆಗೆ ಮೀಸಲಿದ್ದ ಜಾಗ ಎನ್ನುತ್ತಲೇ ಬಂದುದನ್ನು ಬ್ರಹ್ಮಾವರಕ್ಕೆ ಕ್ರೀಡಾಂಗಣ ಬೇಡಿಕೆಗೆ ಉಡುಪಿ ಮಾಜಿ ಶಾಸಕ ಕ್ರೀಡಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು, 4 ವರ್ಷದ ಹಿಂದೆ ಕಂದಾಯ ಇಲಾಖೆಯಿಂದ ಹಂದಾಡಿ ಗ್ರಾಮದ ಸರ್ವೆ ನಂಬರ್ 8 / ಏ ಒಂದು ಇದರಲ್ಲಿ 5 ಎಕ್ರೆ 53 ಸೆನ್ಸ್ ಜಾಗವನ್ನು ಕ್ರೀಡಾ ಇಲಾಖೆಗೆ ನೀಡುವಲ್ಲಿ ಶ್ರಮಿಸಿ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿದ್ದರು.

ಸದಾ ಕ್ರೀಡಾಳುಗಳು ಒಂದಲ್ಲ ಒಂದು ತರಬೇತಿ ಪಡೆಯಬೇಕಾಗಿದ್ದ ಕ್ರೀಡಾಂಗಣದಲ್ಲಿ ಇದೀಗ ಎಲ್ಲೆಂದರಲ್ಲಿ ಕುಡಿದು ಎಸೆದ ಮದ್ಯದ ಬಾಟಲಿಗಳು ಗ್ಲಾಸ್ ಚೂರುಗಳು ಬಿದ್ದಿವೆ.
ಖಾಸಗಿ ವ್ಯವಹಾರದ ಕೆಲವು ಬ್ಯಾಗ್ ಗಳು, ಬೆಳೆದು ನಿಂತ ಕುರುಚಲು ಗಿಡಗಳು… ಕುರಿ ಮೇವಿನ ತಾಣವಾಗಿ ಇದು ಮಾರ್ಪಟ್ಟಿದೆ.

ಆವರಣದ 2 ಭಾಗದಲ್ಲಿ ದೊಡ್ಡ ಗೇಟ್ ಮಾಡಿ ಕಂದಾಯ ಇಲಾಖೆ ಮತ್ತು ಹಂದಾಡಿ ಗ್ರಾಮ ಪಂಚಾಯತಿ ಬೀಗ ಹಾಕಿ ಕೆಲವು ಸಮಯ ರಕ್ಷಣೆ ಮಾಡಿತ್ತು.
ಆದರೆ ಕೆಲವು ಸಮಯದಲ್ಲಿ ಹಾಕಲಾದ ಬೀಗವನ್ನು ಒಡೆದು ತೆಗೆದು ಸ್ವತಂತ್ರ ಮತ್ತು ಸ್ವೇಚ್ಚೇಗಾಗಿ ಬಳಕೆಯಾಗುತ್ತಿದೆ.
ಪ್ರತೀ ದಿನ ಕತ್ತಲು ಆವರಿಸುತ್ತಿದ್ದಂತೆ ಇಲ್ಲಿ ಎಲ್ಲಿಂದಲೋ ಕಾರಿನಲ್ಲಿ, ಅಟೋ ರೀಕ್ಷಾದಲ್ಲಿ ಕ್ರೀಡಾಂಗಣಕ್ಕೆ ಬಂದು ಇಲ್ಲಿ ಗುಂಡು ಪಾರ್ಟಿ ಮತ್ತು ಅನೈತಿಕ ದಂಧೆಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.


ಶನಿವಾರ ಮತ್ತು ಭಾನುವಾರ ರಾಜ್ಯ ಮಟ್ಟದ ಕ್ರೀಕೆಟ್ ಪಂದ್ಯಾಟ ಆಗಾಗ ನಡೆಯುವುದು ಬಿಟ್ಟರೆ ಕ್ರೀಡಾಂಗಣದ ಒಂದು ಭಾಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹಾರ್ಡ್ ಬಾಲ್ ಕ್ರಿಕೇಟ್ ತರಬೇತಿ ನಡೆಯುತ್ತಿದ್ದು, ಇನ್ನೊಂದು ಭಾಗದಲ್ಲಿ ವಾಲಿಬಾಲ್ ತರಬೇತಿ ನಡೆಯುತ್ತಿದೆ.


ನಗರದ ಮಧ್ಯಭಾಗದಲ್ಲಿರುವ ಕ್ರೀಡಾಂಗಣವನ್ನು ಸೂಕ್ತ ರಕ್ಷಣೆ, ಸಮತಟ್ಟು ಮಾಡಿ ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ಬೆಳಿಗ್ಗೆ ಸಂಜೆ ನಡೆದಾಡಲು ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಆಟ ಆಡಲು ಬೇಕಾದ ಕ್ರೀಡಾಂಗಣವಾಗಿ ಮಾಡಿ, ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಸಂಪೂರ್ಣವಾಗಿ ಮಾರ್ಪಾಡಾಗುವುದಕ್ಕೆ ಬ್ರೇಕ್ ನೀಡಬೇಕಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!