ಬರ್ಲಿನ್ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ಜರ್ಮನಿಯಲ್ಲಿ ಮೊದಲ ಸಾವು ಸಂಭವಿಸಿದೆ ಎಂದು ಜರ್ಮನಿಯ ರಾಬರ್ಟ್ ಕೊಚ್ ಇನ್ ಸ್ಟಿಟ್ಯೂಟ್ ಫಾರ್ ಸಾಂಕ್ರಾಮಿಕ ರೋಗ ಸಂಸ್ಥೆ ತಿಳಿಸಿದೆ.
ಮೃತ ವ್ಯಕ್ತಿಯು 60 ರಿಂದ 79 ರ ನಡುವಿನ ವಯೋಮಾನದವರು ಎಂದು ಹೇಳಿದೆ.
ಜರ್ಮನಿಯಲ್ಲಿ 810 ಹೊಸ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,198 ಕ್ಕೆ ಏರಿಕೆಯಾಗಿದೆ.
Advertisement. Scroll to continue reading.