ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ‘ಮನ್ ಕಿ ಬಾತ್’ ಕಾರ್ಯಕ್ರಮದ 84ನೇ ಸಂಚಿಕೆ ಮತ್ತು ವರ್ಷದ ಕೊನೆಯ ಆವೃತ್ತಿಯಾಗಿ ಇಂದು ಪ್ರಸಾರವಾಯಿತು.
ಮುಂದಿನ ಮನ್ ಕೀ ಬಾತ್ 2022ರಲ್ಲಿ ನಡೆಯಲಿದೆ. ನಾವು ಹೊಸ ಕೆಲಸಗಳನ್ನು ಮಾಡೋಣ ಮತ್ತು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಭಾರತೀಯರ ಸಬಲೀಕರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ. 2022ರಲ್ಲಿ ಹೊಸ ಭಾರತವನ್ನು ನಿರ್ಮಿಸುವ ಸುವರ್ಣ ಪುಟವಾಗಲಿದೆ ಎಂದರು.
ಒಮಿಕ್ರಾನ್ ವಿರುದ್ಧ ಹೋರಾಡಲು ಸ್ವಯಂಜಾಗೃತಿ :
Advertisement. Scroll to continue reading.
ಒಮಿಕ್ರಾನ್ ವಿರುದ್ಧ ಹೋರಾಡಲು ಸ್ವಯಂ ಜಾಗೃತಿ ಮತ್ತು ಸ್ವಯಂ ಶಿಸ್ತಿನ ಶಕ್ತಿಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದು,
ಕೋವಿಡ್19 ಒಮಿಕ್ರಾನ್ ಹೊಸ ರೂಪಾಂತರವು ನಮ್ಮ ಬಾಗಿಲುಗಳನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನ ಮುಖ್ಯವಾಗಿದೆ ಎಂದು ಅವರು ಹೇಳಿದರು.
Advertisement. Scroll to continue reading.
In this article:Diksoochi news, diksoochi Tv, diksoochi udupi, mann ki baath, Omicron Variant, PM Modi
Click to comment