Connect with us

Hi, what are you looking for?

Diksoochi News

ಸಾಹಿತ್ಯ

ಉಡುಪಿ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ತುಳು ಪಾಡ್ದನಗಳ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆ

6

ಉಡುಪಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ  ವತಿಯಿಂದ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದೊಂದಿಗೆ ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಕನ್ನಡ ವಿದ್ಯಾರ್ಥಿಗಳಲ್ಲಿ ತುಳು ಪಾಡ್ದನಗಳ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ ” ತುಳು ಪಾಡ್ದನಗಳ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆ – 2021″ ಆಯೋಜಿಸಲಾಗಿದೆ. ಭಾರತದ ಯಾವುದೇ ಕಾಲೇಜಿನ ಪಿಯುಸಿ/ ಪದವಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

  • ಭಾರತದ ಯಾವುದೇ ಕಾಲೇಜಿನ ಪಿಯುಸಿ/ಪದವಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • ಒಂದು ತುಳು ಪಾಡ್ದನದ ಸಾರಾಂಶ, ಐತಿಹಾಸಿಕ, ಸಾಮಾಜಿಕ, ಜಾನಪದ, ಸ್ತ್ರೀವಾದಿ ಅಂಶಗಳು ಮತ್ತು ಭಾಷೆಯ ಸೊಗಸಿನ ಕುರಿತು ಸಮೀಕ್ಷೆ ಬರೆಯಬೇಕು.
  • ಪುಟ ಮಿತಿ ಫುಲ್ ಸ್ಕೇಪ್ ನಲ್ಲಿ ಕನಿಷ್ಠ 8 ಪುಟಗಳು
  • ಪ್ರಬಂಧವನ್ನು ಡಿ.ಟಿ.ಪಿ ಅಥವಾ ಕೈ ಬರಹದಲ್ಲಿ ಈ ವಿಳಾಸಕ್ಕೆ ಕಳುಹಿಸಬೇಕು.

ಪ್ರಬಂಧ ತಲುಪಿಸಲು ಕೊನೆಯ ದಿನಾಂಕ : 25 – 01 – 2022

  • ಪ್ರಥಮ ಬಹುಮಾನ : 2000 ರೂ., ದ್ವಿತೀಯ ಬಹುಮಾನ : 1500 ರೂ., ತೃತೀಯ ಬಹುಮಾನ : 1000 ರೂ.
  • ಮೆಚ್ಚುಗೆ ಪಡೆದ ಪ್ರಬಂಧಗಳಿಗೆ ಪುಸ್ತಕ ಬಹುಮಾನ
  • ಬಹುಮಾನ ಪಡೆದ ಪ್ರಬಂಧಗಳನ್ನು YouTube ನಲ್ಲಿ ಪ್ರಕಟಿಸಲಾಗುವುದು

ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ ಸಾರ್ ಹಾಗೂ ರಿಜಿಸ್ಟ್ರಾರ್ ಕವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!