ಬೆಂಗಳೂರು : ಇಂದಿನಿಂದ ರಾಜ್ಯಾದಾಂದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದೆ. ನಾಳೆಯಿಂದ ಪ್ಲೈ ಓವರ್ ಮುಚ್ಚಲಾಗುವುದು. ಇಂದು ಮೊದಲನೇ ದಿನ ಆಗಿರುವುದರಿಂದ ಬೆಂಗಳೂರಿನಲ್ಲಿ ಇಂದು ಫ್ಲೈಓವರ್‌ಗಳನ್ನು ಕ್ಲೋಸ್ ಮಾಡಲ್ಲ.
ನಾಳೆಯಿಂದ ಫ್ಲೈಓವರ್‌ಗಳನ್ನು ಕ್ಲೋಸ್ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಅವಕಾಶವಿಲ್ಲ:
ಬೆಂಗಳೂರಿನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪರಿಶೀಲನೆ ನಡೆಸಲಾಗುವುದು. ರಾತ್ರಿ 10ರ ಬಳಿಕ ವಾಣಿಜ್ಯ ಚಟುವಟಿಕೆಗೂ ಬಂದ್ ಮಾಡಬೇಕು. ರಾತ್ರಿ 10 ರ ಬಳಿಕ ಹೋಟೆಲ್, ಪಬ್, ರೆಸ್ಟೋರೆಂಟ್ ಮುಚ್ಚಬೇಕು. ಇನ್ನು ಡಿಸೆಂಬರ್ 31ರಂದೂ ನೈಟ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೇ ಡಿಸೆಂಬರ್ 31ರ ರಾತ್ರಿ ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಇರಲ್ಲ. ಬ್ರಿಗೇಡ್ ರೋಡ್, ಎಂ.ಜಿ ರೋಡ್, ಕೋರಮಂಗಲ ಹಾಗೂ ಇಂದಿರಾನಗರದ ಕಡೆ ಯಾರೂ ಅನಗತ್ಯವಾಗಿ ಬರುವಂತಿಲ್ಲ.
ಅಗತ್ಯವಿದ್ರೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ, ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಾಗುತ ಅವಶ್ಯಕತೆ ಇದ್ದವರು ತಿರುಗಾಡಬಹುದು. ನಾಕ ಬಂಧಿಯನ್ನು ಹಾಕಲಾಗುತ್ತದೆ ಎಂದರು.