ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಹಿಂದೂ ಜಾಗರಣ ವೇದಿಕೆಯವರು ಬಾರಕೂರು ಪರಿಸರದಲ್ಲಿ ಕೆಲವಾರು ಸಮಯದಿಂದ ರಾತ್ರಿ ಮತ್ತು ಹಗಲು ರಸ್ತೆ ಬದಿಯಲ್ಲಿರುವ ಹಲವಾರು ಜಾನುವಾರುಗಳನ್ನು ಗೋ ಕಳ್ಳರು ಅಪಹರಿಸುವ ಮುನ್ನ ಇಲ್ಲಿನ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಜಾನುವಾರುಗಳನ್ನು ರಕ್ಷಿಸಿ ಆಹಾರ ನೀಡಿ ಬುಧವಾರ ಸಮೀಪದ ನೀಲಾವರ ಗೋಶಾಲೆಗೆ ನೀಡಿದರು.
ಬಹುತೇಕ ಕಡೆಯಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿ ಗೊಂಡ ಬಳಿಕವೂ ಮನೆಯಲ್ಲಿ ಜಾನುವಾರುಗಳನ್ನು ಸಾಕುವವರು ಗಂಡು ಕರು ಎಂದು ಗೊತ್ತಾದ ಬಳಿಕ ಅದನ್ನು ಕಟುಕರಿಗೆ, ಮಧ್ಯವರ್ತಿಗಳ ಮೂಲಕ ನೀಡುವುದು ಅಥವಾ ಎಲ್ಲೆಂದರಲ್ಲಿ ಬಿಟ್ಟು ಹೋಗುವ ವಿದ್ಯಮಾನ ಹೆಚ್ಚುತ್ತಿದೆ.
ಗಂಡು ಕರುವನ್ನು ಕಟುಕರಿಗೆ ನೀಡುವ ಬದಲು ಅಥವಾ ಹಟ್ಟಿಗೆ ನುಗ್ಗಿ ಗೋ ಕಳ್ಳತನ ಮಾಡುವವರಿಗೆ ಸಿಗದಂತೆ ಗೋಶಾಲೆಗೆ ನೀಡಿದ ಸ್ಥಳಿಯ ಹಿಂದೂಜಾಗರಣ ವೇದಿಕೆಯವರು ಕಾರ್ಯ ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಎಲ್ಲಾ ಭಾಗದಲ್ಲಿ ಇಂತಹ ಕಾರ್ಯವಾದಲ್ಲಿ ಗೋ ಸಾಗಾಟ ಮತ್ತು ಗೋ ವಧೆಗೆ ಕಡಿವಾಣ ಹಾಕಿದಂತಾಗುತ್ತದೆ.