ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಒಂದೆಡೆ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂಬುದು, ಮತ್ತೊಂದೆಡೆ ಕನ್ನಡ ಶಾಲೆಯನ್ನು ಬೆಳೆಸಬೇಕು ಎಂಬ ಕೂಗು ಕೇಳುತ್ತಲೇ ಇದೆ. ಆದರೆ, ಇದಕ್ಕೆ ತದ್ವಿರುದ್ದವಾದ ನಿದರ್ಶನವೊಂದು ಹೆಬ್ರಿ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಡ್ಪಾಲು ಸೀತಾನದಿ. ಇಲ್ಲಿ ಶಿಕ್ಷಕರ ಗೈರು ಹಾಜರಿಯಿಂದ, ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಶಿಕ್ಷಕರ ಸ್ವಪ್ರತಿಷ್ಠೆ ಹಾಗೂ ಸ್ವಾರ್ಥ ಶಿಕ್ಷಣ ವ್ಯವಸ್ಥೆಗೆ ಮುಜುಗರ ತರುವ ಸನ್ನಿವೇಶ ಬುಧವಾರ ನಿರ್ಮಾಣವಾಗಿದೆ.
ಶಾಲೆಯಲ್ಲಿ ಸುಮಾರು 20 ಮಕ್ಕಳಿದ್ದು, ಒಟ್ಟು 3 ಶಿಕ್ಷಕರಿದ್ದು ಒಬ್ಬರು ಶಿಶುಪಾಲನ ರಜೆಯಲ್ಲಿ ಹೋಗಿದ್ದು, ಇನ್ನೊಬ್ಬರನ್ನು ನಿಯೋಗದ ಮೇಲೆ ನೆಲ್ಲಿಕಟ್ಟೆ ಶಾಲೆಗೆ ನಿಯೋಜಿಸಲಾಗಿತ್ತು. ಒಬ್ಬಾಕೆ ರಜೆ ಮಂಜೂರಾಗಿದೆ. ಅನಾರೋಗ್ಯ ಕಾರಣ ಹೇಳಿ ಶಾಲೆಗೆ ರಜೆ ಹಾಕಿದ ಕಾರಣ ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಕಂಗಾಲಾದರು. ಈ ವಿಷಯ ತಿಳಿದ ನಂತರ ಸಿಆರ್ ಸಿ ಶಾಲೆಗೆ ಆಗಮಿಸಿ ಸಹಕರಿಸಿದರು.
ದೌಡಾಯಿಸಿದ ಬಿ ಆರ್ ಸಿ ಹಾಗೂ ಸಿಆರ್ ಸಿಗಳು
ಶಿಕ್ಷಕರ ಗೈರುಹಾಜರಿಯ ವಿಷಯ ತಿಳಿದು ಬಿ ಆರ್ ಸಿ ಹಾಗೂ ಸಿಆರ್ ಸಿ ಅಧಿಕಾರಿಗಳು ಭೇಟಿ ಮಾಡಿ ಹೆತ್ತವರಲ್ಲಿ ಧೈರ್ಯ ತುಂಬಿದರು. ನಂತರ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಸಿಆರ್ ಸಿ ಪ್ರತಿಮಾ ಹೊತ್ತು ಶಾಲೆಯನ್ನು ಮುನ್ನಡೆಸಿದರು.ಸರ್ಕಾರಿ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಸ್ವಾರ್ಥ ಹಾಗೂ ಪ್ರತಿಷ್ಠೆಯಿಂದಾಗಿ ಮಕ್ಕಳ ಜೀವನದಲ್ಲಿ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ. ಸರ್ಕಾರಿ ವ್ಯವಸ್ಥೆಗಳ ಬಗ್ಗೆ ಈ ನಿದರ್ಶನ ಮುಜುಗರ ತಂದಿಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಕ್ರಮವಹಿಸಿ ಸರ್ಕಾರಿ ವ್ಯವಸ್ಥೆಗಳ ಬಗ್ಗೆ ಜನರಿಗೆ ನಕರಾತ್ಮಕ ನಿಲುವು ಬರುವಹಾಗೆ ನಡೆದುಕೊಳ್ಳಬೇಕಾಗಿದೆ.ದಿನೇಶ್ ಹೆಗ್ಡೆ, ಅಧ್ಯಕ್ಷ, ನಾಡ್ಪಲ್ ಗ್ರಾಮ ಪಂಚಾಯಿತಿ
ಅಧಿಕಾರಿಗಳ ಅಸಡ್ಡೆತನ:
ರಜೆ ಮಂಜೂರಾಗಿದ, ಹೇಗೆ ರಜೆಯನ್ನು ಶಿಕ್ಷಕರ ಹಾಕಲು ಸಾಧ್ಯ. ರಜೆ ಹಾಕಿದವರ ಬಗ್ಗೆ ಕೇಳಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿರುತ್ತೇನೆ ಎನ್ನುತ್ತಾರೆ. ಆದರೆ ಕ್ಷೇತ್ರ ಶಿಕ್ಷಣ ಅಧಿಕಾರಿ ನನ್ನ ಗಮನಕ್ಕೆ ಬಂದಿಲ್ಲವೆಂದು ಇಬ್ಬರು ನುಣುಚಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಟಿಸಿ ಪಡೆಯಲು ಹೆತ್ತವರು ಪಟ್ಟು:
ಶಾಲೆಯಲ್ಲಿ ಉಂಟಾದ ಈ ರೀತಿಯ ಪರಿಸ್ಥಿತಿಯಿಂದಾಗಿ ಹೆತ್ತವರು, ತಮ್ಮ ಮಕ್ಕಳ ಭವಿಷ್ಯತ್ತಿನ ಬಗ್ಗೆ ದಿಗ್ಭ್ರಮೆಗೊಂಡು ಶಾಲೆಯಲ್ಲಿ ಟಿಸಿಯನ್ನು ಹಿಂಪಡೆಯಲು ಪಟ್ಟುಹಿಡಿದಿದ್ದಾರೆ. ಸರ್ಕಾರಿ ಶಾಲೆಯ ಬಗ್ಗೆ ಇದ್ದ ಎಲ್ಲಾ ನಂಬಿಕೆಗಳನ್ನು ಕಳೆದುಕೊಂಡು ಹೆತ್ತವರು ಈ ರೀತಿಯಾಗಿ ವರ್ತಿಸಿದರು. ಕೊನೆಗೆ ಬಿ ಆರ್ ಸಿ ಹಾಗೂ ಸಿಆರ್ ಸಿ ಸಮಾಧಾನಪಡಿಸಿದರು ಹೆತ್ತವರು ಒಪ್ಪಲಿಲ್ಲ.
ರಜೆ ಮಂಜೂರು ಆಗದೆ, ಶಿಕ್ಷಕಿ ಶಾಲೆಗೆ ರಜೆ ಹಾಕಿರುವುದು ಗಮನಕ್ಕೆ ಬಂದಿದೆ. ಒಬ್ಬರು ಶಿಶುಪಾಲನಾ ರಜೆಯಲ್ಲಿದ್ದು, ರಜೆ ಹಾಕಿದ ಶಿಕ್ಷಕಿಯಲ್ಲಿ ವಿಚಾರಿಸಿದಾಗ ಅನಾರೋಗ್ಯದ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.ವೆಂಕಟೇಶ್ ನಾಯಕ್, ಕ್ಷೇತ್ರಶಿಕ್ಷಣಾಧಿಕಾರಿ, ಕಾರ್ಕಳ
ಶಿಕ್ಷಣ ಇಲಾಖೆಯವರು ಗಮನಿಸಬೇಕು:
ತಾಲೂಕಿನ ವಿವಿಧ ಶಾಲೆಗಳಲ್ಲಿ ಅನೇಕ ಕಾರಣಗಳನ್ನು ನೀಡಿ ಶಿಕ್ಷಕರನ್ನು ವರ್ಗಾವಣೆ/ ನಿಯೋಜನೆ ಮಾಡಿರುವುದು ಖಂಡನೀಯ ವಾದುದು. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಒಬ್ಬರು, ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಅನಾರೋಗ್ಯ ಅಥವಾ ಅಗತ್ಯ ತುರ್ತು ಸಂದರ್ಭಗಳಲ್ಲಿ ಶಿಕ್ಷಕರಿಗೆ ರಜೆ ಮಂಜೂರು ಆಗುವುದಿಲ್ಲ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಲಾಖೆ ಕಾರ್ಯನಿರ್ವಹಿಸಬೇಕಾಗಿದೆ.