ವರದಿ : ಬಿ.ಎಸ್.ಆಚಾರ್ಯ
ಮಣಿಪಾಲ : ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಪ್ರಿಯರು ಮದ್ಯ ಕುಡಿಯುವ ಗುಂಗಿನಲ್ಲಿದ್ದರೆ, ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲದ, ಅವಧಿ ಮುಗಿದಿರುವ, ಮಾರಾಟವಾಗದೇ ಉಳಿದಿರುವ ಮದ್ಯವನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮ ಉಡುಪಿ ಡಿಪೋದ ಬಳಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವರ್ಷ ಅಂತ್ಯದ ದಿನವಾದ ಇಂದು ನಾಶಪಡಿಸಿದರು.
ಉಡುಪಿ ಜಿಲ್ಲಾ ಉಪಅಧೀಕ್ಷಕಿ ಜ್ಯೋತಿಯವರ ಸಮಕ್ಷಮದಲ್ಲಿ 746.505 ಲೀಟರ್ ವೈನ್, 1505.345 ಲೀಟರ್ ಮದ್ಯ ಹಾಗೂ 2769. 620ಲೀಟರ್ ಬೀಯರ್ ನ್ನು ಆಳವಾದ ಹೊಂಡ ತೋಡಿ ಅದರಲ್ಲಿ ಹೂಳಲಾಗಿದೆ.
ಈ ಸಂದರ್ಭ ಡಿಪೋ ಮ್ಯಾನೇಜರ್ ಗುರುಮೂರ್ತಿ, ಡಿಪೋ ವ್ಯವಸ್ಥಾಪಕ ಸಂತೋಷ್ ರಾವ್ ಹಾಗೂ ಮಾರಾಟ ಪ್ರತಿನಿಧಿಗಳು ಉಪಸ್ಥಿತರಿದ್ದರು.
Advertisement. Scroll to continue reading.
In this article:brahmavar, Diksoochi news, diksoochi Tv, diksoochi udupi, Excise Department, Udupi
Click to comment