ಬೆಂಗಳೂರು: ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪ.ಬಂಗಾಳದಲ್ಲಿ ಕೋವಿಡ್, ಒಮಿಕ್ರಾನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಒಮಿಕ್ರಾನ್ ಕೋವಿಡ್ ಗಿಂತ5 ಪಟ್ಟು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಎರಡು ದಿನದಿಂದ ಕೋವಿಡ್ ಡಬಲ್ ಆಗುತ್ತಿದೆ. 5, 6 ದಿನದಲ್ಲಿ 10,000 ಆಗಬಹುದು. ಹಾಗಾಗಿ ಬೆಂಗಳೂರಿಗೆ ಒಂದು ನಿಯಮ, ಇತರೆಡೆ ಬೇರೆ ನಿಯಮ ಜಾರಿ ತರಲು ಚಿಂತಿಸಲಾಗಿದೆ. ಮೆಟ್ರೊ ಸಿಟಿಯಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ವಿದೇಶದಲ್ಲಿ ಹೆಚ್ಚಾಗುತ್ತಿದೆ. 20 ರಿಂದ 50 ವರ್ಷದವರಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಆರ್ ಅಶೋಕ್ ಹೇಳಿದರು.
ಸಿಎಂ ನೇತೃತ್ವದ ತಜ್ಞರ ಜೊತೆಗಿನ ಸುದೀರ್ಘ ಎರಡೂವರೆ ಗಂಟೆಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ರಾತ್ರಿ 10 ಗಂಟೆಯಿಂದ ಕೋವಿಡ್ ರೂಲ್ಸ್ ಜಾರಿಯಲ್ಲಿ ಬರಲಿದೆ. 10 ಮತ್ತು 12ನೇ ತರಗತಿಗಳು ಮಾತ್ರ ತೆರೆದಿರಲು ನಿರ್ಧರಿಸಲಾಗಿದೆ. ಆನ್ ಲೈನ್ ತರಗತಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕರ್ಪ್ಯೂ ತೀರ್ಮಾನಕೈಗೊಳ್ಳಲಾಗಿದೆ. ನೈಟ್ ಕರ್ಪ್ಯೂ ಮತ್ತೆ ಎರಡು ವಾರ ವಿಸ್ತರಿಸಲಾಗಿದೆ ಎಂದರು.
ಹೊಸ ರೂಲ್ಸ್
ಜ. 6 ರಿಂದ ಬೆಂಗಳೂರಿನಲ್ಲಿ 10 ರಿಂದ 12 ತರಗತಿ ಮಾತ್ರ ಇರಲಿದೆ. ಮೆಡಿಕಲ್, ಪ್ಯಾರಾ ಮೆಡಿಕಲ್ ತರಗತಿ ಮಾತ್ರ ಅವಕಾಶ. ಆನ್ಲೈನ್ ತರಗತಿ ಇರಲಿದೆ.
ನೈಟ್ ಕರ್ಫ್ಯೂ ವಿಸ್ತರಣೆ
ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕರ್ಪ್ಯೂ , ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ, ವೀಕೆಂಡ್ ಕರ್ಫ್ಯೂ ಜಾರಿ
ಚಿತ್ರಮಂದಿರ, ಬಾರ್, ಪಬ್, ಮಾಲ್ ಸಾರ್ವಜನಿಕ ಸ್ಥಳದಲ್ಲಿ 50: 50 ರೂಲ್ಸ್
ಮದುವೆ ಹೊರಾಂಗಣ 200 ಜನ, ಒಳಾಂಗಣ 100 ಮಂದಿಗೆ ಅವಕಾಶ
ಎರಡು ಡೋಸ್ ಲಸಿಕೆ ಕಡ್ಡಾಯ
ವಿದೇಶಿಗರಿಗೆ ಕೇಂದ್ರದ ಮಾರ್ಗಸೂಚಿ ಅನ್ವಯ
ಹೊರ ರಾಜ್ಯದಿಂದ ಬರುವವರಿಗೆ ಆರ್ ಟಿ ಪಿ ಸಿ ಆರ್ ವರದಿ ಕಡ್ಡಾಯ
ವೀಕೆಂಡ್ ನಲ್ಲಿ ಅಗತ್ಯ ವಸ್ತು ಬಿಟ್ಟರೆ ಎಲ್ಲವೂ ಬಂದ್
ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಅವಕಾಶವಿಲ್ಲ. ಯಾವುದೇ ಸಂಘ-ಸಂಸ್ಥೆಗಳ ಪ್ರತಿಭಟನೆ, ರ್ಯಾಲಿಗೆ ಅವಕಾಶ ಇಲ್ಲ, ಜನಜಂಗುಳಿ ಸೇರುವಂತಿಲ್ಲ
ದೇವಸ್ಥಾನಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ
ದೇವರ ದರ್ಶನಕ್ಕೆ ಮಾತ್ರ ಅವಕಾಶ