Connect with us

Hi, what are you looking for?

Diksoochi News

ಕರಾವಳಿ

ವಾರಾಂತ್ಯ ಕರ್ಫ್ಯೂ; ಕಟ್ಟಡ ಕಾರ್ಮಿಕರು ಕೆಲಸಕ್ಕೆ ತೆರಳಲು ಅವಕಾಶಕ್ಕಾಗಿ ಸಂಘದ ಮನವಿ

4

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ: ಕೊರೋನಾದ ರೂಪಾಂತರ ತಳಿ ತಡೆಯಲು ಸರಕಾರವೂ ಜಾರಿ ಮಾಡಿದ ವಾರಾಂತ್ಯದ ಕರ್ಪ್ಯೂ ವಿನಲ್ಲಿ ಕಟ್ಟಡ ಕಾರ್ಮಿಕರಿಗೆ ಅಡ್ಡಿಪಡಿಸದೇ ನಿರ್ಮಾಣ ಕೆಲಸಕ್ಕೆ ಅವಕಾಶ ನೀಡಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) (ಸಿಡಬ್ಲ್ಯೂಎಫ್ಐ-ಸಿಐಟಿಯು) ಪೋಲಿಸ್ ಇಲಾಖೆಯನ್ನು ಒತ್ತಾಯಿಸುತ್ತದೆ.
ದಿನಗೂಲಿ ಕಾರ್ಮಿಕರಾಗಿರುವ ಕಟ್ಟಡ ಕಾರ್ಮಿಕರು ಕಳೆದ ಎರಡು ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ನಿರ್ಮಾಣ ಕ್ಷೇತ್ರದ ಬಿಕ್ಕಟ್ಟಿನಿಂದಾಗಿ ನಿರ್ಮಾಣ ಕೆಲಸಗಳು ಕುಂಠಿತಗೊಂಡು ಯಾವುದೇ ಆರ್ಥಿಕ ಭದ್ರತೆ ಇಲ್ಲದಿರುವ ಕಾರ್ಮಿಕ ವರ್ಗವಾಗಿದೆ. ವಿವಿಧ ರೀತಿಯ ಸಾಲ ಕಟ್ಟಲಾಗದೇ ಕುಟುಂಬ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.
ವಾರಾಂತ್ಯ ಕರ್ಪ್ಯೂವಿಂದ ಕಟ್ಟಡ ಕಾರ್ಮಿಕರಿಗೆ ವಿನಾಯಿತಿ ನೀಡಬೇಕೆಂದು ಇಲಾಖೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಒತ್ತಾಯಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!