ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕೊರೋನಾ, ಒಮಿಕ್ರಾನ್ ನಿಂದ ಹೆಚ್ಚಿನ ಅಪಾಯ ಇಲ್ಲ ಎಂದಾದ ಮೇಲೆ ವಾರಾಂತ್ಯದ ಕರ್ಪ್ಯೂ ಯಾಕೆ, ಜನರು ಮೊದಲೇ ಸಂಕಷ್ಟದಲ್ಲಿದ್ದಾರೆ, ಜನರನ್ನು ಮೊದಲು ಬದುಕಲು ಬಿಡಿ, ಉಡುಪಿ ಶಾಸಕ ರಘುಪತಿ ಭಟ್ ಕೂಡ ಲಾಕ್ ಡೌನ್, ಕರ್ಪ್ಯೂ ಬೇಡ ಹೇಳಿದ್ದಾರೆ. ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿದೆ, ಹೀಗಾದರೇ ಹಳ್ಳಿಯ ಮನೆಮಂದಿ ಬದುಕುವುದು ಹೇಗೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.
ಅವರು ಗುರುವಾರ ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಜಿಲ್ಲೆಯ ಇಬ್ಬರು ಸಚಿವರಿದ್ದರೂ ಅವರಿಗೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಲಾಕ್ ಡೌನ್ ಬಗ್ಗೆ ಚಕಾರವೇ ಎತ್ತುತ್ತಿಲ್ಲ, ಸರ್ಕಾರ, ಶಾಸಕರು, ಸಚಿವರು ಎಷ್ಟು ಜನರನ್ನು ಕೂಡ ಸೇರಿ ಸಭೆ ಮಾಡಬಹುದು. ವಿಧಾನ ಪರಿಷತ್, ಪುರಸಭೆ ಚುನಾವಣೆಗಳು ನಡೆದಿದೆ. ಚುನಾವಣಾ ಬೃಹತ್ ಸಭೆಗಳು ನಡೆದಿದೆ ಆಗ ಅಪಾಯ ಇರಲಿಲ್ಲ. ಈಗ ಹಳ್ಳಿಯ ಮಂದಿಗೆ ಮಾತ್ರ ಕಠಿಣ ಕಾನೂನು ಎಂದು ಆಕ್ರೋಶ ವ್ಯಕ್ತ ಪಡಿಸಿದ ಮಂಜುನಾಥ ಪೂಜಾರಿ, ಇಂದು ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನಕ್ಕೆ ಮಾಸ್ಕ್ ಧರಿಸದೆ ಸಾವಿರಾರು ಜನ ಸೇರಿದ್ದರು. ಆಗ ಕಾನೂನು ಎಲ್ಲಿ ಹೋಗಿತ್ತು. ಇದು ಜನರನ್ನು ಇನ್ನಷ್ಟು ಹೈರಾಣಾಗಿಸುವ ಸರ್ಕಾರದ ಹುನ್ನಾರ, ಬಡವರು ಜನಸಾಮಾನ್ಯರಿಗೊಂದು ಗೊಂದು ಕಾನೂನು ಸರ್ಕಾರದವರಿಗೊಂದು ಕಾನೂನು ಎಂದು ದೂರಿದರು.
ಕೊರೊನ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾಡಿದ ಎಡವಟ್ಟು ಕಾನೂನಿನಿಂದಾಗಿ ಉದ್ಯಮ, ಸಣ್ಣ ಉದ್ಯಮ, ಕೈಗಾರಿಕೆ ಸೇರಿ ಬಹುತೇಕ ಮಂದಿ ಹೇಳಿಕೊಳ್ಳಲಾಗದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಸ್ವಲ್ಪ ಮಟ್ಟಿನಲ್ಲಿ ಮತ್ತೇ ವ್ಯಾಪಾರ ವಹಿವಾಟುಗಳು ಚಿಗುರಿಕೊಳ್ಳುತ್ತದೆ ಎನ್ನುವಾಗ ಸರ್ಕಾರ ಮತ್ತೆ ಜನರ ಬದುಕಿನಲ್ಲಿ ಆಟವಾಡುತ್ತಿದೆ. ಬಿಜೆಪಿ ಮತ್ತು ಬಿಜೆಪಿ ಸರ್ಕಾರಕ್ಕೆ ಜನರ ಸಂಕಷ್ಟವೇ ಅರ್ಥವಾಗುತ್ತಿಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು.
ರಾಜಕೀಯ ವಿರೋಧಿಗಳನ್ನು ಮಣಿಸಲು ಸರ್ಕಾರ ಕರ್ಪ್ಯೂ ಹೇರಿಕೆ ಮಾಡುತ್ತಿದೆ. ಇದರಿಂದ ಜನರು ಇನ್ನೂ ಸಂಕಷ್ಟಕ್ಕೆ ಹೋಗುತ್ತಾರೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಪ್ರಮುಖರಾದ ಶಶಿಕಲಾ ಡಿ. ಪೂಜಾರಿ, ವಿಶು ಕುಮಾರ್ ಉಪಸ್ಥಿತರಿದ್ದರು.