ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೋವಿಡ್ ನಿಯಮದಿಂದ ಸಭಾ ಭವನದ ಮಾಲಕರು ಮತ್ತು ಲಕ್ಷಾಂತರ ಕಾರ್ಮಿಕರು ತೀರಾ ತೊಂದರೆ ಅನುಭವಿಸುವಂತೆ ಆಗಿದೆ ಎಂದು ಉಡುಪಿ ಜಿಲ್ಲಾ ಸಭಾ ಭವನಗಳ ಒಕ್ಕೂಟದ ವತಿಯಿಂದ ಅಸಮಾಧಾನ ವ್ಯಕ್ತವಾಗಿದೆ.
ಗುರುವಾರ ಸಂಜೆ ಬ್ರಹ್ಮಾವರ ಮದರ್ ಪ್ಯಾಲೇಸ್ ನಲ್ಲಿ ನಡೆದ ಸುದ್ದಿ ಗೊಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಶೇಡಿಕೊಡ್ಲು ವಿಠಲ್ ಶೆಟ್ಟಿ ಮಾತನಾಡಿ, ಕೋವಿಡ್ ನಿಯಮವನ್ನು ಪಾಲನೆ ಮಾಡಿಕೊಂಡು ಪ್ರತೀ ಸಭಾಂಗಣದ ಅರ್ಧ ಭಾಗದಷ್ಟು ಜನರಿಗೆ ಅವಕಾಶ ಕಲ್ಪಿಸಿ ಈಗಾಗಲೆ ನಿಗದಿಯಾದ ಮದುವೆ ಮತ್ತು ಇನ್ನಿತರ ಶುಭ ಕಾರ್ಯ ಮಾಡಲು ಸರಕಾರ ಅವಕಾಶ ನೀಡಬೇಕು ಎಂದು ಹೇಳಿದರು.
ಅಸಂಗಟಿತ ಕಾರ್ಮಿಕರು ಮತ್ತು ಅನಕ್ಷರಸ್ಥರು ಹೆಚ್ಚು ಇರುವ ಸಭಾ ಭವನಗಳಲ್ಲಿ ಇಗಾಗಲೆ ನಿಗದಿಯಾದ ಕಾರ್ಯಕ್ರಮ ಕೂಡಾ ಕ್ಯಾನ್ಸಲ್ ಆಗಿದೆ. ಮಾಲಕರು 2 ವರ್ಷದಿಂದ ಕಾರ್ಯಕ್ರಮಗಳು ಇಲ್ಲದೆ ತೀರಾ ಕಂಗೆಟ್ಟಿದ್ದು ಸರಕಾರಕ್ಕೆ ತೆರಿಗೆ ಸೇರಿದಂತೆ ಕಾರ್ಮಿಕರ ಸಂಬಳ ನೀಡಬೇಕಾಗಿದೆ. ಇದನ್ನೇ ನಂಬಿ ಸಾಲ ಮಾಡಿದ ಹಣಕ್ಕೆ ಬಡ್ಡಿ ಕಟ್ಟಲು ಅಸಾದ್ಯ ಸ್ಥಿತಿ ತಲುಪಿದೆ. ಸರಕಾರ ಮತ್ತು ಆಡಳಿತ ವ್ಯವಸ್ಥೆ ಇಂತಹ ಗಂಭಿರ ಸಮಸ್ಯೆಯನ್ನು ಮನಗಂಡು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಮುಖ್ಯ ಮಂತ್ರಿಗಳಿಗೆ ನಮ್ಮ ಮನವಿಯನ್ನು ನೀಡಲಿದ್ದು ಬೇಡಿಕೆಯ ಈಡೇರಿಸುವಂತೆ ವಿನಂತಿಸಿದ್ದಾರೆ.
ಈಗಾಗಲೆ ಒಕ್ಕೂಟದಲ್ಲಿ 250 ಸದಸ್ಯರು ನೊಂದಾವಣೆಯಾಗಿದ್ದು ಮುಂದೆ ರಾಜ್ಯ ಮಟ್ಟದಲ್ಲಿ ಸಂಘಟನೆಯಾಗಲಿದೆ ಎಂದರು.
ಬ್ರಹ್ಮಾವರ ಮದರ್ ಪ್ಯಾಲೇಸ್ ಮಾಲಿಕ ಭರತ್ ಕುಮಾರ್ ಶೆಟ್ಟಿ ಮಾತನಾಡಿ ವೀಕ್ ಎಂಡ್ ಕರ್ಫ್ಯೂ ಮಾಡುವುದರಿಂದ ಏನು ವೈಜ್ಞಾನಿಕ ಹಿನ್ನೆಲೆ ಇದೆ ಕೋವಿಡ್ ನಿಯಂತ್ರಣ ಅದರಿಂದ ಆಗುತ್ತದಯೇ ಹೊರಾಂಗಣ ಕಾರ್ಯಕ್ರಮದಲ್ಲಿ ಕೋವಿಡ್ ಹಬ್ಬುವುದಿಲ್ಲವೇ ಎಂದು ಹಲವಾರು ನಿಯಮಗಳ ಕುರಿತು ಪ್ರಶ್ನಿಸಿದರು.
ನಾನಾ ಸಭಾಭವನಗಳ ಮಾಲಕ ಒಕ್ಕೂಟದ ಪಧಾಧಿಕಾರಿಗಳಾದ, ಪ್ರದೀಪ್ ಚಂದ್ರ ಶೆಟ್ಟಿ , ರಾಜಾರಾಮ್ ಶೆಟ್ಟಿ , ಹರೀಶ್ ಎಂ, ಚಂದ್ರ ಶೇಖರ ಶೆಟ್ಟಿ ಗೋಷ್ಟಿಯಲ್ಲಿದ್ದರು.