ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಇಂದು ವಿಕೇಂಡ್ ಕರ್ಫ್ಯೂ ಗೆ ಬ್ರಹ್ಮಾವರ ಭಾಗದಲ್ಲಿ ತೀರಾ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗ್ಗೆ ಎಂದಿನಂತೆ ಎಲ್ಲಾ ಅಂಗಡಿಗಳು ತೆರೆದಿದ್ದು, ಬಳಿಕ ಹತ್ತು ಗಂಟೆ ಸಮಯಕ್ಕೆ ತಾಲೂಕು ಆಡಳಿತ ಪೋಲೀಸ್ ಇಲಾಖೆ ಅಂಗಡಿ ಗಳನ್ನು ಬಂದ ಮಾಡುವಂತೆ ಪ್ರಚಾರ ಮಾಡಿ ಕೆಲವೊಂದು ಅಂಗಡಿಗಳನ್ನು ಮುಚ್ಚಿಸಿದರು.
ಬಳಿಕ ಇಲ್ಲಿನ ಕೆಲವು ಅಂಗಡಿಗಳು ತೆರೆದಿರುವುದು ಜನರ ಅಸಮಾಧಾನಕ್ಕೆ ಕಾರಣವಾಯಿತು.
ದಿನಸಿ ಅಂಗಡಿ ಹಣ್ಣು ತರಕಾರಿ ಸೇರಿದಂತೆ ಅಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಎಂದಿನಂತೆ ಓಡಾಟ ನಡೆಸಿತ್ತು. ಬಸ್ ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರು ವಿರಳವಾಗಿದ್ದರು.
ಮದುವೆ ಇನ್ನಿತರ ಶುಭ ಕಾರ್ಯ ಗಳು ಕೆಲವೊಂದು ಶರತ್ತುಗಳ ಮೇಲೆ ನಡೆಯುವ ವಿದ್ಯಮಾನಕ್ಕೆ ಮದುಮಗಳ ಬಟ್ಟೆ ಹೊಲಿಯಲು ನೀಡಿದ ಟೈಲರ ಅಂಗಡಿಯವರು ಹೊಲಿಯಲು ತಯಾರು ಮಾಡುತ್ತಿರುವಂತೆ ಅಂಗಡಿ ಮುಚ್ಚುವಂತೆ ಅಧಿಕಾರಿಗಳು ಹೇಳಿದುದಲ್ಲದೆ ಬಾಗಿಲು ತೆರೆದರೆ ಎಪ್ ಐ ಆರ್ ದಾಖಲಿಸುವ ಬೆದರಿಕೆ ಹಾಕಿದಾಗ ಹೊಟ್ಟೆ ಪಾಡಿಗಾಗಿ ಸ್ವಂತ ಅಂಗಡಿ ಮಾಡಿಕೊಂಡು ಬದುಕುವ ಮಹಿಳೆಯೊಬ್ಬರು ತಮ್ಮ ಅಳಲನ್ನು ತೊಡಿಕೊಂಡರು.
ಬಸ್ ಸಂಚಾರ ಮರಳುಗಾರಿಕೆ ಸೇರಿದಂತೆ ಬಹುತೇಕ ಕೆಲಸಗಳು ನಡೆಯುತ್ತಿದ್ದು, ಒಂಟಿಯಾಗಿ ಕೆಲಸ ಮಾಡಿ ಬದುಕು ಕಟ್ಟಿಕೊಂಡವರ ಬಗ್ಗೆ ಸರಕಾರ ಅಥವಾ ಆಡಳಿತ ನಮ್ಮ ಬದುಕಿಗೆ ದಾರಿ ಮಾಡಿಕೊಡಲಿ ಎನ್ನುವ ಆಕ್ರೋಶದ ಮಾತನಾಡಿದರು.
ಇದೇ ರೀತಿಯಲ್ಲಿ ಅನೇಕರು ಅಸಮಾಧಾನ ಆಕ್ರೋಶ ವ್ಯಕ್ತ ಪಡಿಸಿದರು.