ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು 7 ಹಂತಗಳಲ್ಲಿ ನಡಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10 ರಂದು ಫಲಿತಾಂಶ ಹೊರಬೀಳಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು, ಕೋರೊನಾ ಸಂದರ್ಭದಲ್ಲಿಯೂ ಚುನಾವಣೆ ನಡೆಸೋದು ಸವಾಲಿನ ಕೆಲಸವಾಗಿದೆ. ಅವಧಿಗೆ ಮುನ್ನವೇ ಚುನಾವಣೆ ನಡೆಸೋದು ನಮ್ಮ ಕರ್ತವ್ಯವಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಲಾಯ, ಆರೋಗ್ಯ ಸಚಿವಾಲಯದ ಜೊತೆಗೆ ನಿರಂತರವಾಗಿ ಚರ್ಚೆ ನಡೆಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆಯೂ ಚರ್ಚಿಸಿ ಚುನಾವಣೆ ನಡೆಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಮುಂಜಾಗ್ರತಾ ಕ್ರಮ :
ಕೊರೋನಾ ಮುಂಜಾಗ್ರತಾ ಕ್ರಮದೊಂದಿಗೆ ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ. ಕುಡಿಯುವ ನೀರು, ಕೊರೋನಾ ಸೋಂಕಿತರಿಗೂ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ. ಪೋಸ್ಟ್ ಬ್ಯಾಲೆಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬೂತ್ ಬಳಿಯಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾರರು ಮತದಾನ ಮಾಡುವಂತೆ ಮನವಿ ಮಾಡಿದರು.
ಚುನಾವಣಾ ಕರ್ತವ್ಯಕ್ಕೆ ಎರಡು ಡೋಸ್ ಲಸಿಕೆ:
ಈ ಬಾರಿಯ ಐದು ವಿಧಾನಸಭಾ ಚುನಾವಣೆಯ ಶೇ.60 ರಷ್ಟು ಬೂತ್ ಗಳ ಮತದಾನದ ವಿವರಗಳನ್ನು ವೆಬ್ ಕಾಸ್ಟ್ ಮಾಡಲಾಗುತ್ತಿದ್ದೇವೆ. ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಯನ್ನು ಫಿಲ್ಟರ್ ಮಾಡಲಾಗುತ್ತಿದೆ. ಐದು ರಾಜ್ಯಗಳ ಚುನಾವಣೆಗಾಗಿ 24.5 ಲಕ್ಷ ಮತದಾರರು ಮೊದಲ ಬಾರಿಗೆ ಮತಚಲಾಯಿಸುತ್ತಿದ್ದಾರೆ. 2.15 ಲಕ್ಷ ಮತಗಟ್ಟೆಗಳನ್ನು ಈ ಬಾರಿ ಚುನಾವಣೆಗಾಗಿ ಸ್ಥಾಫಿಸಲಾಗಿದೆ. ವಿವಿ ಪ್ಯಾಡ್, ಇವಿಎಂಗಳ ಮೂಲಕ ಚುನಾವಣೆ ನಡೆಸಲಾಗುತ್ತಿದೆ ಎಂದರು.
ಎರಡು ಡೋಸ್ ಲಸಿಕೆ ಪಡೆದಂತ ನೌಕರರನ್ನು ಮಾತ್ರವೇ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತಿದೆ. ಅಲ್ಲದೇ ಬೂಸ್ಟರ್ ಡೋಸ್ ಲಸಿಕೆಯನ್ನು ಕೂಡ ಪೋಲಿಂಗ್ ಆಫೀಸರ್ ಗಳಿಗೆ ನೀಡಲಾಗುತ್ತಿದೆ. ಜೊತೆಗೆ ಚುನಾವಣಾ ಕರ್ತವ್ಯ ನಿರತ ನೌಕರರನ್ನು ಕೊರೋನಾ ವಾರಿಯರ್ಸ್ ಗಳೆಂದು ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.
ಡಿಜಿಟಲ್ ಮಾಧ್ಯಮ ಮೂಲಕ ಪ್ರಚಾರ:
ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಕೊರೋನಾ ಕಾರಣದಿಂದಾಗಿ ಚುನಾವಣಾ ಪ್ರಚಾರವನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಸುವಂತೆ ಸೂಚಿಸಿದ್ದಾರೆ. ಈ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರ ನಡೆಸಿ ಎಂದರು. ಜನವರಿ 15, 2022ವರೆಗೆ ಯಾವುದೇ ಪಕ್ಷದ ಪಾದಯಾತ್ರೆ, ವಾಹನ ಯಾತ್ರೆ, ಬೈಕ್ ರ್ಯಾಲಿಯನ್ನು ನಿಷೇಧಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಯಾವುದೇ ಪಾದಯಾತ್ರೆ, ಪ್ರಚಾರಕ್ಕೆ ಅವಕಾಶ ಇಲ್ಲ. ಮತಏಣಿಕೆಯ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂದರು.
ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ :
7 ಹಂತದ ಚುನಾವಣೆ ನಡೆಸಲಾಗುವುದು. 14-01-2022ರಿಂದ ಮೊದಲ ಅಧಿಸೂಚನೆ ಉತ್ತರ ಪ್ರದೇಶದಲ್ಲಿ ಹೊರಡಿಸಲಿದೆ. 21ನೇ ನಾಮಪತ್ರ ಸಲ್ಲಿಕೆ ಆರಂಭ, ಜನವರಿ 24 ನಾಮಪತ್ರಗಳ ಪರಿಶೀಲನೆ. 27 10-02-2022ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. 10-03-2022ರಂದು ಚುನಾವಣೆಯ ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ಮೊದಲ ಹಂತ, ಫೆ.14 ಎರಡನೇ ಹಂತ, ಫೆ.20 ಮೂರನೇ ಹಂತ, ಫೆಬ್ರವರಿ 23 ನಾಲ್ಕನೇ ಹಂತ, ಫೆಬ್ರವರಿ 27 ಐದನೇ ಹಂತ, ಮಾರ್ಚ್ 3 ರಂದು 6 ನೇ ಹಂತ, ಮಾರ್ಚ್ 7 ಏಳನೇ ಹಂತದ ಚುನಾವಣೆ ನಡೆಯಲಿದೆ. ಫೆಬ್ರವರಿ 14 ರಂದು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ, ಪಂಜಾಬ್ 117 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಉತ್ತರಾಖಂಡ್ 70 ವಿಧಾಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಣಿಪುರದ 60 ಚುನಾವಣೆ 2 ಹಂತದಲ್ಲಿ ನಡೆಯಲಿದೆ. ಫೆ.27 ಮೊದಲ ಹಂತ, ಮಾರ್ಚ್ 3ರಂದು 2ನೇ ಹಂತದ ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾಣೆಯ ಫಲಿತಾಂಶ ಮಾರ್ಚ್ 10 ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
1ನೇ ಹಂತ: ಫೆ.10
2ನೇ ಹಂತ: ಫೆ.14
3ನೇ ಹಂತ: ಫೆ.20
4ನೇ ಹಂತ: ಫೆ.23
5ನೇ ಹಂತ: ಫೆ.27
6ನೇ ಹಂತ: ಮಾರ್ಚ್ 3
7ನೇ ಹಂತ: ಮಾರ್ಚ್ 7