ಹೆಬ್ರಿ: ಹೆಬ್ರಿಯ ಕೆರೆಬೆಟ್ಟು ಎಂಬಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ರವಿವಾರ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .
ಕೆರೆಬೆಟ್ಟು ನಿವಾಸಿ ಸತೀಶ್ ಶೆಟ್ಟಿ ಹಾಗೂ ಮಮತಾ ಶೆಟ್ಟಿ ಅವರ ಪುತ್ರ ಹೆಬ್ರಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ಅನ್ವಿತ್ ಶೆಟ್ಟಿ 14 ವರ್ಷ ಪ್ರಾಯದ ವಿದ್ಯಾರ್ಥಿ ರವಿವಾರ ಬೆಳಿಗ್ಗೆ ತನ್ನ ಮನೆಯ ಬಾತ್ ರೂಮಿನಲ್ಲಿರುವ ಕಬ್ಬಿಣದ ರಾಡ್ ಗೆ ಚೂಡಿದಾರದ ವೇಲ್ ಅನ್ನು ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆ ಬಿಗಿದು ಬಕೆಟ್ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ .ಬಾತ್ ರೂಮಿಗೆ ಹೋಗಿ ಕೆಲ ಸಮಯ ಆದರೂ ಅಣ್ಣ ಬರಲಿಲ್ಲ ಅಂತ ತಮ್ಮ ಬಾಗಿಲು ಬಡಿದರೂ ಬಾಗಿಲು ತೆಗೆಯದಿದ್ದಾಗ. ಐದನೇ ತರಗತಿ ಓದುತ್ತಿರುವ ಸಹೋದರ ಬಾತ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡಿದಾಗ ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು . ಕೂಡಲೇ ಮನೆಯವರು ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆತಂದರು.ವೈದ್ಯರು ಪರೀಕ್ಷೆ ನಡೆಸಿದ ನಂತರ ಮೃತಪಟ್ಟಿದ್ದು ಖಚಿತಪಡಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.