ದೆಹಲಿ: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರವಾದ ದುರ್ನಡತೆ ಮಾತ್ರವಲ್ಲ, ಅದು ಅಪರಾಧವೂ ಹೌದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್ (ಪಿಎಸಿ) ಪಡೆಯನ್ನು ಕರೆದೊಯ್ದ ಟ್ರಕ್‌ನ ಚಾಲಕನೊಬ್ಬ ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ,ಮದ್ಯ ಕುಡಿದ ಯಾವ ವ್ಯಕ್ತಿಗೂ ವಾಹನ ಚಾಲನೆ ಮಾಡಲು ಅನುಮತಿ ನೀಡಬಾರದು. ಮದ್ಯ ಕುಡಿದು ವಾಹನ ಚಾಲನೆ ಮಾಡುವುದು ಹಾಗೂ ಆ ಮೂಲಕ ಇತರರ ಜೀವದೊಂದಿಗೆ ಚೆಲ್ಲಾಟವಾಗುವುದು ಗಂಭೀರವಾದ ದುರ್ನಡತೆ ಎಂದು ಹೇಳಿದೆ.
Advertisement. Scroll to continue reading.
2000ರಲ್ಲಿ ಕುಂಭಮೇಳಕ್ಕೆ ಅಲಹಾಬಾದ್‌ನಿಂದ ಪೊಲೀಸ್ ಸಿಬ್ಬಂದಿಯನ್ನು ಕರೆದೊಯ್ಯುವಾಗ, ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿರುವ ಟ್ರಕ್ ಚಾಲಕನಿಗೆ ಕಡ್ಡಾಯ ನಿವೃತ್ತಿ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿತು.
In this article:Diksoochi news, diksoochi Tv, diksoochi udupi, drunk and drive case, supreme Court, ಕುಡಿದು ವಾಹನ ಚಾಲನೆ, ಸುಪ್ರೀಂಕೋರ್ಟ್
Click to comment