ನವದೆಹಲಿ : 2022-23 ನೇ ಸಾಲಿನ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
ಪ್ರಮುಖ ಅಂಶಗಳು :
ಶೀಘ್ರದಲ್ಲೇ ಎಲ್ ಐ ಸಿಯಿಂದ ಬಂಡವಾಳ ಹಿಂತೆಗೆತ.
ಪಿಎಂ ಗತಿಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಡಲಿದೆ. ಭಾರತದ ಆರ್ಥಿಕತೆಯನ್ನು ಎಳೆಯಲು 7 ಎಂಜಿನ್ ಗಳ ಶಕ್ತಿ
ಉತ್ಪಾದಕತೆ ಹೆಚ್ಚಳ,ರೈಲು, ರಸ್ತೆ, ಏರ್ ಪೋರ್ಟ್ ಗಳ ಅಭಿವೃದ್ಧಿ. ರಸ್ತೆ ನಿರ್ಮಾಣಕ್ಕೆ ಪ್ರಮುಖ ಆದ್ಯತೆ. 25,000 ಕೋ.ರೂ.ಹೂಡಿಕೆ. ಉತ್ಪಾದನೆ
400 ಹೆಚ್ಚುವರಿ ಒಂದೇ ಭಾರತ್ ರೈಲು ಆರಂಭ. ರೈಲು ನಿಲ್ದಾಣಗಳ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ. 2000
ರಸ್ತೆ ನಿರ್ಮಾಣಗಳಿಗೆ ರೋಪ್ ವೇ ನಿರ್ಮಾಣ, ನಿರ್ವಹಣೆ ಸುಲಭ. ಗೂಡ್ಸ್, ಜನ ಸಾಗಣೆಗೆ ರೋಪ್ ವೇ ಬಳಕೆ
ರೈತರಿಂದ 1200 ಲಕ್ಷ ಮೆಟ್ರಿಕ್ ಗೋಧಿ, ಭತ್ತ ಖರೀದಿ
ಗಂಗಾ ನದಿಯ 5 ಕಿ.ಮೀ. ಅಕ್ಕ ಪಕ್ಕದಲ್ಲಿ ಸಾವಯವ ಕೃಷಿಗೆ ಆದ್ಯತೆ
ಬೆಳೆ ಸಮೀಕ್ಷೆಗೆ ಡ್ರೋಣ್ ತಂತ್ರಜ್ಞಾನ ಬಳಕೆ
ಎಣ್ಣೆ ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹಕ್ಕೆ ಕ್ರಮ
ಎಸ್ ಸಿ, ಎಸ್ ಟಿ ರೈತರಿಗೆ ಆರ್ಥಿಕ ನೆರವು
ಹೈಡ್ರೋ ಮತ್ತು ಸೋಲಾರ್ ಪವರ್ ಗೆ 4,300 ಕೋ.ರೂ.
ದೇಶದ 5 ನದಿ ಜೋಡಣೆಗೆ ಒತ್ತು. ಗೋದಾವರಿ – ಕೃಷ್ಣಾ, ಪೆನ್ನಾರ್ – ಕಾವೇರಿ, ಕಾವೇರಿ – ಪೆನ್ನಾರ್ ನದಿ, ನರ್ಮದಾ – ಗೋದಾವರಿ ಜೋಡಣೆ
ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ
ಸಣ್ಣ ಉದ್ದಿಮೆಗಳಿಗೆ ತುರ್ತು ಸಾಲ. 2023 ರ ಮಾರ್ಚ್ ವರೆಗೆ ತುರ್ತು ಸಾಲ ವಿಸ್ತರಣೆ
ಕೌಶಲ್ಯಾಭಿವೃದ್ಧಿಗೆ ಆನ್ ಲೈನ್ ತರಬೇತಿ
ಪಿಎಂ ಇ ವಿದ್ಯಾ – ಸರ್ಕಾರಿ ಶಾಲೆ ಮಕ್ಕಳಿಗೆ ಒನ್ ಕ್ಲಾಸ್ – ಒನ್ ಟಿವಿ ಕಾರ್ಯಕ್ರಮ
200 ಟಿವಿ ಚಾನೆಲ್ ಗಳ ಮೂಲಕ ಪರ್ಯಾಯ ಶಿಕ್ಷಣ. 1 ರಿಂದ 12 ನೇ ತರಗತಿವರೆಗೆ ಟಿವಿ ಚಾನಲ್ ಗಳ ಮೂಲಕ ಶಿಕ್ಷಣ.
ಕೊರೋನಾದಿಂದ ಶಿಕ್ಷಣ ವಂಚಿತ ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಡಿಜಿಟಲ್ ಶಿಕ್ಷಣ.
2 ಲಕ್ಷ ಅಂಗನವಾಡಿಗಳ ಉನ್ನತೀಕರಣ
ಆರೋಗ್ಯ ಕ್ಷೇತ್ರದಲ್ಲಿ ಡಿಜಲೀಕರಣಕ್ಕೆ ಆದ್ಯತೆ. ಕೊರೋನಾ ಕಾಲದಲ್ಲಿ ಹದಗೆಟ್ಟ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆ. 23 ಮಾನಸಿಕ ಆರೋಗ್ಯ ಕೇಂದ್ರ. ಬೆಂಗಳೂರಿನ ನಿಮ್ಹಾನ್ಸ್ ಗೆ ನೇತೃತ್ವದ ಹೊಣೆ.
2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನೀರು ಪೂರೈಕೆ. ಒಟ್ಟು 12 ಕೋಟಿ ಮನೆಗಳಿಗೆ ನೀರು ಪೂರೈಕೆ ಗುರಿ
ಮನೆ ನಿರ್ಮಾಣದ ದಾಖಲೀಕರಣ ಸರಳ. ರಾಜ್ಯ ಸರ್ಕಾರದೊಂದಿಗೆ ದಾಖಲೀಕರಣ ಸರಳ.
2023 ರೊಳಗೆ 18 ಲಕ್ಷ ಮನೆ ನಿರ್ಮಾಣದ ಗುರಿ.
ಪೋಸ್ಟ್ ಆಫೀಸ್ ಗಳಿಗೆ ಬ್ಯಾಂಕ್ ಸ್ವರೂಪ. ಎಟಿಎಂ, ಡಿಜಿಟಲ್ ಬ್ಯಾಂಕಿಂಗ್ ಸೇವೆ.
1.4 ಲಕ್ಷ ಪೋಸ್ಟ್ ಆಫೀಸ್ ಗಳ ಸ್ವರೂಪ ಬದಲು
1486 ಅನುಪಯುಕ್ತ ಕಾನೂನುಗಳ ರದ್ದು, 25 ಲಕ್ಷ ಅನುಪಯುಕ್ತ ನಿಯಮಗಳ ರದ್ದು
ವಿದೇಶ ಪ್ರವಾಸ ಇನ್ನಷ್ಟು ಸರಳಗೊಳಿಸಲು ತಂತ್ರಜ್ಞಾನ ಜಾರಿ. ಇ- ಪಾಸ್ ಪೋರ್ಟ್ ಗೆ ಆಧುನಿಕತೆಯ ಸ್ಪರ್ಶ
ಒನ್ ನೇಷನ್ – ಒನ್ ರಿಜಿಸ್ಟ್ರೇಷನ್ ಯೋಜನೆ ಘೋಷಣೆ. ಜಮೀನು ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ. 8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜಟಲೀಕರಣ.
ಗುತ್ತಿಗೆ ಹಣ ಪಡೆಯಲು ಗುತ್ತಿಗೆದಾರರು ಅಲೆದಾಡುವಂತಿಲ್ಲ. ಬಿಲ್ ಮಂಡಿಸಿದ 10 ದಿನಗಳಲ್ಲಿ ಶೇ.75 ರಷ್ಟು ಹಣ ಪಾವತಿ
2022 ರಲ್ಲೇ 5 ಜಿ ತರಂಗಾಂತರ ಹರಾಜು
ಪ್ರತಿಯೊಂದು ಗ್ರಾಮಕ್ಕೂ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ವ್ಯವಸ್ಥೆ . ಖಾಸಗಿ ಸಹಭಾಗಿತ್ವದಲ್ಲಿ ಇಂಟರ್ನೆಟ್. 2025 ರೊಳಗೆ ಪ್ರತೀ ಗ್ರಾಮಕ್ಕೂ ಇಂಟರ್ನೆಟ್.
ರಕ್ಷಣಾ ಇಲಾಖೆಯಲ್ಲೂ ಆತ್ಮ ನಿರ್ಭರಕ್ಕೆ ಒತ್ತು. ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಶೇ.68 ರಷ್ಟು ಸ್ಥಳೀಯ ಖರೀದಿ ಕಡ್ಡಾಯ. ರಕ್ಷಣಾ ಸಾಮಗ್ರಿ, ಸಂಶೋಧನೆಯಲ್ಲಿ ಖಾಸಗಿಯವರಿಗೆ ಒತ್ತು.
ರಕ್ಷಣಾ ಬಜೆಟ್ ನ ಶೇ.25 ರಷ್ಟು ಅನುದಾನ ಸಂಶೋಧನೆಗೆ ಮೀಸಲು. ಶಸ್ತ್ರಾಸ್ತ್ರಗಳ ಆಮದು ಕಡಿತಗೊಳಿಸಲು ಕ್ರಮ
2030 ರ ವೇಳೆ 8 ಗಿಗಾ ಹರ್ಟ್ಸ್ ಸೌರ ವಿದ್ಯುತ್ ಉತ್ಪಾದನೆ 19.5 ಸಾವಿರ ಕೋ.ರೂ. ಪ್ರೋತ್ಸಾಹ ಧನ
ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆ ಲೆಕ್ಕಾಚಾರ ಹೆಚ್ಚಳ. 7.50 ಲಕ್ಷ ಕೋ.ಬಂಡವಾಳ ಹೂಡಿಕೆ. ಉದ್ಯೋಗ ಸೃಷ್ಟಿಯಲ್ಲಿ ಬಂಡವಾಳ ಹೂಡಿಕೆಯಿಂದ ಸಹಾಯ. ಶೇ.34.5 ರಷ್ಟು ಬಂಡವಾಳ ಹೂಡಿಕೆ ಹೆಚ್ಚಳ.
ಕೇಂದ್ರ ಸರ್ಕಾರದಿಂದ ಡಿಜಿಟಲ್ ಕರೆನ್ಸಿ ಘೋಷಣೆ. ಆರ್ ಬಿ ಐ ನಿಂದ ಹೊಸ ಡಿಜಿಟಲ್ ಕರೆನ್ಸಿ ಆರಂಭ
ಬಂಡವಾಳ ಕ್ರೋಡೀಕರಣಕ್ಕೆ ಗ್ರೀನ್ ಬಾಂಡ್
ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋ.ರೂ ಬಡ್ಡಿ ರಹಿತ ಸಾಲ. ಈಗಾಗಲೇ ನೀಡಲಾಗುವ ಸಾಲ ಹೊರತು ಪಡಿಸಿ ಹೆಚ್ಚುವರಿ ಸಾಲ. ಸಾಲ ಮರು ಪಾವತಿ ಅವಧಿ 50 ವರ್ಷಕ್ಕೆ ನಿಗದಿ.
ವಿತ್ತೀಯ ಕೊರತೆ ಡಿಜಿಪಿಯ ಶೇ. 6.9
2 ವರ್ಷದೊಳಗೆ ದಂಡ ರಹಿತ ಹೆಚ್ಚುವರಿ ತೆರಿಗೆ ಪಾವತಿಗೆ ಅವಕಾಶ
ಸಹಕಾರ ಸಂಘಗಳಿಗೆ ಏಕ ರೂಪದ ತೆರಿಗೆ ವ್ಯವಸ್ಥೆ.
ಶೇ.18 ರಿಂದ ಶೇ. 16 ಕ್ಕೆ ಇಳಿಕೆ
ವಿಶೇಷಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯಿತಿ
ಪೋಷಕರು ಬದುಕಿರುವಾಗಲೇ ವಿಮೆ ಹಣ ಪಡೆಯಲು ಅವಕಾಶ
ಕೇಂದ್ರ – ರಾಜ್ಯ ಸರ್ಕಾರಿ ನೌಕರರಿಗೆ ಏಕರೂಪದ ತೆರಿಗೆ
2023 ರ ಮಾರ್ಚ್ ವರೆಗೂ ತೆರಿಗೆ ವಿನಾಯಿತಿ ವಿಸ್ತರಣೆ
ಮುಂದಿನ ವರ್ಷದ ವರೆಗೂ ಸ್ಟಾರ್ಟ್ ಅಪ್ಸ್ ಗಳಿಗೆ ತೆರಿಗೆ ವಿನಾಯಿತಿ. ಡಿಜಿಟಲ್ ಆಸ್ತಿ ಮೇಲೆ ಶೇ.30ರಷ್ಟು ತೆರಿಗೆ
ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ಘೋಷಣೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆಗೆ ಶೇ.1 ರಷ್ಟು ಟಿಡಿಎಸ್ ಕಡಿತ
ಐಟಿ ದಾಳಿ ವೇಳೆ ಸಿಕ್ಕ ಸಂಪತ್ತಿಗೆ ತೆರಿಗೆ ಕಟ್ಟಲೇಬೇಕು
ವ್ಯವಹಾರಿಕ ವೆಚ್ಚಕ್ಕೆ ಶಿಕ್ಷಣ, ಆರೋಗ್ಯದ ಸೆಸ್ ಇಲ್ಲ
ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಘೋಷಣೆ
ಜಿ ಎಸ್ ಟಿ ಸಂಗ್ರಹದಲ್ಲಿ ಹಳೆಯ ದಾಖಲೆಗಳು ಬ್ರೇಕ್
ಕಚ್ಛಾ ವಜ್ರದ ಮೇಲೆ ಆಮದು ಸುಂಕ ಶೇ. 5 ರಷ್ಟು ಕಡಿತ.
ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಬೆಲೆ ಇಳಿಕೆ. ಚಿನ್ನ, ಮೊಬೈಲ್, ಚಾರ್ಜರ್, ಬಟ್ಟೆ, ಚಪ್ಪಲಿಗಳ ಬೆಲೆ ಇಳಿಕೆ. ಕೊಡೆಗಳ ಬೆಲೆ ಶೇ.20 ರಷ್ಟು ಇಳಿಕೆ
ವೈದ್ಯಕೀಯ ಉಪಕರಣಗಳು, ಔಷಧಗಳ ಬೆಲೆ ಇಳಿಕೆ
ಅನ್ ಬ್ಲೆಂಡೆಂಡ್ ಇಂಧನ ಬೆಲೆ 2 ರೂ.ಹೆಚ್ಚುವರಿ ಸುಂಕ