ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಇವರು ಮಂಗಳವಾರ ಹೆಬ್ರಿ ಬೀಡು ಎಂಬಲ್ಲಿ 1ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದರು.
ಹೆಬ್ರಿ- ಬೀಡು – ಬಂಗಾರಗುಡ್ಡೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಸುಮಾರು 1ಕೋಟಿ ರೂ. ಮಂಜೂರಾಗಿದ್ದು ಇದರ ಕಾಮಗಾರಿಗೆ ಚಾಲನೆ ನೀಡಲು ಮಂಗಳವಾರ ಸಚಿವರು ಗುದ್ದಲಿ ಪೂಜೆ ನಡೆಸಿ ಮಾತನಾಡಿ, ಪ್ರತಿ ಗ್ರಾಮದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಭಿವೃದ್ಧಿಯಲ್ಲಿ ನಮ್ಮ ಜತೆ ಕೈಜೋಡಿಸಿ ಎಂದರು.
ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್ ಹಾಗೂ ಸದಸ್ಯರು ಸ್ಥಳೀಯ ಮುಖಂಡರಾದ ಗುರುದಾಸ್ ಶೆಣೈ, ಪ್ರವೀಣ್ ಬಲ್ಲಾಳ್, ಸತೀಶ್ ಪೈ, ಜ್ಯೋತಿ ಹರೀಶ್ , ರಮೇಶ್ ಕುಮಾರ್ , ಸೀತಾನದಿ ರಮೇಶ ಹೆಗ್ಡೆ , ನವೀನ್ ಅಡ್ಯಂತಾಯ, ಭೋಜ ಪೂಜಾರಿ, ಜೀವನ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.