ವರದಿ : ದಿನೇಶ್ ರಾಯಪ್ಪನಮಠ
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ-ಪಡುಕೆರೆ ಇಲ್ಲಿನ ಭಾರತ ಸರಕಾರದ ನೆಹರೂ ಯುವ ಕೇಂದ್ರ, ಉಡುಪಿ ಹಾಗೂ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟ ಕಾಲೇಜುಗಳನ್ನೊಳಗೊಂಡ ಅಂತರ್ ಕಾಲೇಜು ಕರಿಯರ್ ಪ್ಲಾನಿಂಗ್ & ಮ್ಯಾನೇಜ್‍ಮೆಂಟ್ ಕುರಿತಾದ ಒಂದುದಿನದ ಕಾರ್ಯಗಾರ ಆಯೋಜಿಸಲಾಯಿತು.
ಕಾರ್ಯಗಾರ ಉದ್ಘಾಟನೆ ಮಾಡಿದ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಇಂತಹ ಕಾರ್ಯಗಾರದ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆಯಿತ್ತರೆ, ಮುಖ್ಯ ಅತಿಥಿಗಳಾದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ.ಸಿ.ಕುಂದರ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಜ್ಞಾನ ಸಾಲದು ಉದ್ಯೋಗ ಪಡೆಯಲು ಅವಶ್ಯವಾದ ಕೌಶಲಗಳನ್ನು ಬೆಳಸಿಕೊಂಡು ಸಾಮರ್ಥ್ಯ ಹೆಚ್ಚಿಸಿಕೊಂಡಲ್ಲಿ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಸಿದರು. ನೆ
ಹರೂ ಯುವ ಕೇಂದ್ರ ಉಡುಪಿಯ ಸಮನ್ವಯಾಧಿಕಾರಿ ಹಾಗೂ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿ’ಸೋಜ ಕಾರ್ಯಕ್ರಮದ ಔಚಿತ್ಯ, ರೂಪುರೇಶಿಗಳ ವಿವರಣೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ನಿತ್ಯಾನಂದ.ವಿ.ಗಾಂವ್ಕರ ವಿದ್ಯಾರ್ಥಿಗಳು ವಿದ್ಯಾರ್ಥಿದಿಸೆಯಲ್ಲಿ ವ್ಯಕ್ತಿತ್ವ ವಿಕಸನದ ಸಂಪೂರ್ಣ ಕೌಶಲಗಳನ್ನು ತಿಳಿದುಕೊಂಡಲ್ಲಿ ಮಾತ್ರ ಭವಿಷ್ಯ ಉಜ್ವಲವಾಗಬಲ್ಲದೆಂದು ಶುಭಾಶಯ ಕೋರಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬಂಟಕಲ್ ಮಾದ್ವ ವಿದ್ಯಾಸಂಸ್ಥೆಯ ಡಾ.ಸಿ.ಕೆ.ಮಂಜುನಾಥ್ ವಾಣಿಜ್ಯಶಾಸ್ತ್ರ ಮತ್ತು ಮಾನವಿಕ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಿಗೆ ವೃತ್ತಿ ಭವಿಷ್ಯ ಕುರಿತಾಗಿ ವಿವರವಾದ ಮಾಹಿತಿ ನೀಡಿದರು. ಮಾಹೆಯ ವಿದ್ಯಾರ್ಥಿ ಆಪ್ತಸಮಾಲೋಚಕ ಡಾ.ರಯಾನ್ ಮಥಾಯಸ್ ಪ್ರೊಫೆಶನಲ್ ಕಾಂಪಿಟೆನ್ಸೀಸ್ ಮತ್ತು ಇಮೋಶನಲ್ ಇಂಟೆಲಿಜೆನ್ಸ್ ಕುರಿತಾಗಿ ಅಗತ್ಯ ಮಾಹಿತಿ ನೀಡಿದರು. ಉಡುಪಿ ಉನ್ನತಿ ಕೆರಿಯರ್ ಅಕಾಡೆಮಿ ಕಾರ್ಪೊರೇಟ್ ಟ್ರೇನರ್ ನವೀನ್ ನಾಯಕ್ ಜೀವನ-ವೃತ್ತಿ ಕೌಶಲ, ಸಂದರ್ಶನ ಎದುರಿಸುವ ಕಲೆ, ಸಂವಹನ ಕಲೆ ಇತ್ಯಾದಿಗಳನ್ನೊಳಗೊಂಡ ಸಾಮಥ್ರ್ಯ ಹೆಚ್ಚಿಸಿಕೊಳ್ಳುವ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಗಾರದಲ್ಲಿ ಮಂಗಳೂರು ವಿ.ವಿ.ವ್ಯಾಪ್ತಿಗೆ ಒಳಪಟ್ಟ ಸರಕಾರಿ ಪದವಿ ಕಾಲೇಜುಳಾದ ಬಾರ್ಕೂರು, ಹೆಬ್ರಿ, ಕಾರ್ಕಳ, ಹಿರಿಯಡ್ಕ, ಪಡುಕರೆ, ಶಂಕರನಾರಾಯಣ ಹಾಗೂ ಖಾಸಗಿ ಕಾಲೇಜುಗಳಾದ ಎಸ್.ಎಮ್.ಎಸ್, ಕ್ರಾಸಲ್ಯಾಂಡ್, ಬ್ರಹ್ಮಾವರ, ಭಂಡಾರ್‍ಕಾರ್ಸ್ ಕಾಲೇಜು, ಎಮ್.ಜಿ.ಎಮ್, ಮಿಲಾಗ್ರೀಸ್, ಬ್ಯಾರಿಸ್, ತೆಕ್ಕಟ್ಟೆ ಪಿ.ಯು ಕಾಲೇಜು ಇತ್ಯಾದಿ 15 ಕಾಲೇಜುಗಳಿಂದ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಗಾರ ಆಯೋಜಿಸಿದ ಪ್ಲೇಸ್‍ಮೆಂಟ್ ಸೆಲ್ ಸಂಚಾಲಕ ಪ್ರಶಾಂತ್ ನೀಲಾವರ ಸ್ವಾಗತಿಸಿದರೆ, ಮಂಜುನಾಥ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು.