ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ ಸಾಲಿಕೇರಿಯಲ್ಲಿ ಫೆಬ್ರವರಿ 10 ರಿಂದ 19 ರ ತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗುವ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಸಿರು ಹೊರೆಕಾಣಿಕೆ ಮೆರವಣಿಗೆ ಬ್ರಹ್ಮಾವರ ಗಾಂಧಿ ಮೈದಾನದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ66 ಉಪ್ಪಿನಕೋಟೆ ಮೂಲಕ ಶ್ರೀಕ್ಷೇತ್ರ ಸಾಲಿಕೇರಿಗೆ ಸಾಗಿ ಬಂತು.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿ ಕೆ .ಸೂರ್ಯನಾರಾಯಣ ಉಪಾಧ್ಯಾಯ ಮೆರವಣಿಗೆ ಚಾಲನೆ ನೀಡಿದರು.
ದೇವಸ್ಥಾನದ ಆಡಳಿತ ಮೋಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಕಿನ್ನಿಮೂಲ್ಕಿ , ಪ್ರಧಾನ ಕಾರ್ಯದರ್ಶಿ ರಾಘವ ಶೆಟ್ಟಿಗಾರ್ , ಕೋಶಾಧಿಕಾರಿ ಸುರೇಶ್ ಶೆಟ್ಟಿಗಾರ್ ,ಹೊರೆಕಾಣಿಕೆ ಮತ್ತು ಮೆರವಣಿಗೆ ಸಮಿತಿಯ ಶ್ರೀಧರ ಶೆಟ್ಟಿಗಾರ್, ಸಹ ಮಕ್ತೇಸರ ರವೀಂದ್ರ ಶೆಟ್ಟಿಗಾರ್ , ಉದಯ ಶೆಟ್ಟಿಗಾರ್ , ಸುಧಾಕರ ಶೆಟ್ಟಿಗಾರ್ ,ಅಣ್ಣಪ್ಪ ಶೆಟ್ಟಿಗಾರ್ , ಸತೀಶ್ ಶೆಟ್ಟಿಗಾರ್ ಮತ್ತು ಇನ್ನಿತರ ಸಮಿತಿಯ ಪಧಾಧಿಕಾರಿಗಳು ಮೆರವಣಿಗೆಯಲ್ಲಿದ್ದರು.
ಚಂಡೆ, ಬೊಂಬೆ ಕುಣಿತ, ದೇವಸ್ಥಾನದ ಮಹಿಳಾ ಸಮಿತಿಯ ಸದಸ್ಯರ ಸಮವಸ್ತ್ರದ ಪೂರ್ಣಕುಂಭ ಕಲಶ ಮೆರವಣಿಗೆ ಮೆರುಗನ್ನು ಹೆಚ್ಚಿಸಿತ್ತು.
ನಾನಾ ಭಾಗದಿಂದ ಭಕ್ತರು ಹಲವಾರು ವಾಹನ ಮೂಲಕ ಹಸಿರು ಹೊರೆಕಾಣಿಕೆ ದೇವಸ್ಥಾನಕ್ಕೆ ಸಮರ್ಪಿಸಿದರು.