ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ ಸಾಲಿಕೇರಿಯಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಮಂಗಳವಾರ ಜರುಗಿತು.
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ದೇವಸ್ಥಾನಗಳನ್ನು ಕಟ್ಟುವುದರ ಜೊತೆ ಉಳಿಸಿಕೊಂಡು ಕೆಲವೊಂದು ಆಚರಣೆ ಮತ್ತು ನಿಯಮಗಳನ್ನು ರೂಡಿಮಾಡಿಕೊಳ್ಳ ಬೇಕು ಮತ್ತು ಕರಾವಳಿ ಜಿಲ್ಲೆಯ ಪದ್ಮಶಾಲಿ ಜನಾಂಗದ 16 ದೇವಸ್ಥಾನಗಳಿಗೆ ಏಕ ರೂಪದ ಪೂಜಾ ಪದ್ದತಿ ಇರಬೇಕು. ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ ಗುರುಪೀಠ ಬೇಕು ಎಂದರು.
ದೇವಸ್ಥಾನದ ಆಡಳಿತ ಮೋಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಕಿನ್ನಿಮೂಲ್ಕಿ , ಪ್ರಧಾನ ಕಾರ್ಯದರ್ಶಿ ರಾಘವ ಶೆಟ್ಟಿಗಾರ್, ಕೋಶಾಧಿಕಾರಿ ಸುರೇಶ್ ಶೆಟ್ಟಿಗಾರ್ ,
ಹಿಂದಿನ ಆಡಳಿತ ಮೋಕ್ತೇಸರರು ಹಾಲಿ ಆಡಳಿತದ ಸಹ ಮಕ್ತೇಸರರಾದ ಶ್ರೀಧರ ಶೆಟ್ಟಿಗಾರ್, ರವೀಂದ್ರ ಶೆಟ್ಟಿಗಾರ್, ಉದಯ ಶೆಟ್ಟಿಗಾರ್, ಸುಧಾಕರ ಶೆಟ್ಟಿಗಾರ್,ಅಣ್ಣಪ್ಪ ಶೆಟ್ಟಿಗಾರ್, ಸತೀಶ್ ಶೆಟ್ಟಿಗಾರ್, ಮತ್ತು ಇನ್ನಿತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಘು ಶೆಟ್ಟಿಗಾರ್ ಕುಂಚಿಮನೆ ಮತ್ತು 6 ಮಾಗಣೆ ಮೋಕ್ತೇಸರರನ್ನು ಗೌರವಿಸಲಾಯಿತು.