Connect with us

Hi, what are you looking for?

Diksoochi News

ಕರಾವಳಿ

ಹೊಸಕೋಟೆ: ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದ ಕಾರು; ನಾಲ್ವರ ದುರ್ಮರಣ

1

ಬೆಂಗಳೂರು: ವಿದ್ಯಾರ್ಥಿಗಳು ತೆರಳುತ್ತಿದ್ದಂತ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿ, ಆ ಬಳಿಕ ಲಾರಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಅಟ್ಟೂರು ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ವೈಷ್ಣವಿ, ಭರತ್, ಸಿರಿಲ್ ಮತ್ತು ವೆಂಕಟ್ ಮೃತ ವಿದ್ಯಾರ್ಥಿಗಳು. ಸಿರಿಕೃಷ್ಣ ಮತ್ತು ಅಂಕಿತಾ ರೆಡ್ಡಿ ಗಂಭಿರವಾಗಿ ಗಾಯಗೊಂಡವರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತಪಟ್ಟ ವಿದ್ಯಾರ್ಥಿಗಳೆಲ್ಲರೂ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಎಂಬುದಾಗಿ ತಿಳಿದು ಬಂದಿದೆ.

ಮೃತ ವಿದ್ಯಾರ್ಥಿಗಳು ಜಾಲಿ ರೈಡ್ ಗೆ ತೆರಳಿ, ವಾಪಾಸ್ ಆಗುತ್ತಿದ್ದರೆಂದು ತಿಳಿದು ಬಂದಿದೆ. ಈ ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!