ವರದಿ : ದಿನೇಶ್ ರಾಯಪ್ಪನಮಠ
ಕೋಟ: ದುಡಿಯುವ ಕೈಗಳಿಗೆ ಕೆಲಸ ,ಜನರನ್ನು ವಲಸೆ ಹೋಗುವುದನ್ನು ತಪ್ಪಿಸಿ ಅವರಿದ್ದ ಪ್ರದೇಶದಲ್ಲಿಯೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರಕಾರವು ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸದುಪಯೋಗವನ್ನು ಎಲ್ಲಾ ನಾಗರಿಕರು ಪಡೆದುಕೊಂಡಾಗ ಮಾತ್ರ ಯೋಜನೆಯ ಸಾಫಲ್ಯ ಸಾಧ್ಯ ಎಂದು ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ ಹೇಳಿದ್ದಾರೆ.
ಅವರು ಸೋಮವಾರ ಶಿರಿಯಾರ ಗ್ರಾಮ ಪಂಚಾಯತಿನಲ್ಲಿ ನಡೆದ 2021-22 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ನೇ ,,15ನೇ ಹಣಕಾಸು ಯೋಜನೆಯ ಕುರಿತ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯ ಅಧ್ಯಕತೆಯನ್ನು ವಹಿಸಿ ಮಾತನಾಡಿದರು.
ತಾಲೂಕು ಸಂಯೋಜಕರಾದ ಹುಸೇನ್ ಸಾಬ್ ಡಿ.ಕರನಾಚಿರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಈ ಸಭೆಯ ಮಹತ್ವ,ಜನರ ಸಹಭಾಗಿತ್ವ, ಕಾಮಗಾರಿಗಳವಿವರ ,ವೆಚ್ಚ, ಸೃಜನೆಯಾದ ಮಾನವದಿನಗಳು,ಜಾಬ್ ಕಾಡ್9 ಕುರಿತ ಮಾಹಿತಿ,ಸಭೆಯ ಉದ್ದೇಶದ ಕುರಿತು ಮಾತನಾಡಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಅಮಿತಾ , ಗ್ರಾಮಸಂಪನ್ಮೂಲ ವ್ಯಕ್ತಿಗಳಾದ ರಜನಿ.ಬಿ,ಕಾವ್ಯ ಪ್ರಭಾಕರ್ ,ಅಶ್ವಿನಿ, ಪೂರ್ಣಿಮಾ,ಪ್ರಿಯಾಂಕ,ರಾಜೇಶ್ ,ಸ್ವಾತಿ,ಭಾರತಿ ಸೇರಿದಂತೆ ಸದಸ್ಯರು ,ಕಾರ್ಯದರ್ಶಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್‍ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.