ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಸದನದಲ್ಲಿ ಸಚಿವ ಈಶ್ವರಪ್ಪನವರನ್ನ ವಜಾಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಶಾಸಕರು ಸದನದಲ್ಲಿ ಅಹೋ ರಾತ್ರಿ ಧರಣೆ ಕುಳಿತಿರುವ ಹಿನ್ನೆಲೆ ಒಂದೆಡೆ ಅದರೆ ಈಶ್ವರಪ್ಪನವರು ರಾಜಾ ಹುಲಿ, ಹಿಂದೂ ಸಾಮ್ರಾಟ್ ಎಂದು ಬ್ರಹ್ಮಾವರ ಬಿ.ಜೆ.ಪಿ ಕಾರ್ಯಕರ್ತರು ಅವರ ನಿಲುವನ್ನ ಬೆಂಬಲಿಸಿದ್ದಾರೆ.
ಭಾನುವಾರ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಈಶ್ವರಪ್ಪನವರಿಗೆ ಬ್ರಹ್ಮಾವರ ಬಸ್ ನಿಲ್ದಾಣದ ಸಮೀಪದ ಶ್ರೀರಾಮ ಆರ್ಕೆಡ್ ಬಳಿ ಇಲ್ಲಿನ ನೂರಾರು ಬಿಜೆಪಿ ಕಾರ್ಯ ಕರ್ತರು ಸೇರಿ ಅವರಿಗೆ ನೈತಿಕ ಬೆಂಬಲ ಸೂಚಿಸಿ ಜಯಕಾರ ಹಾಕಿದರು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಈಶ್ವರಪ್ಪನವರ ವಾಹನವನ್ನು ಬ್ರಹ್ಮಾವರದಲ್ಲಿ ತಡೆದ ಯುವ ಮುಖಂಡ ಪಂಚಮಿ ಮೋಹನ್ ಶೆಟ್ಟಿಯವರು ಅವರನ್ನು ಹೂವಿನ ಮಾಲೆ ಹಾಕಿ ಸ್ವಾಗತಿಸಿ, ಈಶ್ವರಪ್ಪ ನವರ ಎಲ್ಲಾ ಮಾತುಗಳು ಯುವ ಜನರಿಗೆ ಸ್ಥೂರ್ತಿಯಾಗಿದೆ. ಯಾವೂದೇ ಕಾರಣಕ್ಕೂ ರಾಜೀನಾಮೆ ನೀಡಲೇ ಬೇಡಿ ನಿಮ್ಮೊಂದಿಗೆ ಹಿಂದೂ ಸಮಾಜ ಜೊತೆಗಿದೆ ಎಂದು ಅವರಿಗೆ ಬೆಂಬಲ ಸೂಚಿಸಿದರು.
ಹಿರೀಯ ಬಿಜೆಪಿ ನಾಯಕ ಜ್ಞಾನ ವಸಂತ ಶೆಟ್ಟಿ ಮಾತನಾಡಿ ಕಾಂಗ್ರೆಸಿಗರು ಹಿಜಾಬ್ ವಿಷಯವನ್ನು ಮರೆ ಮಾಚಲು ಬೇರೆ ಯಾವೂದೇ ವಿಷಯ ಇರದೆ ಈಶ್ವರಪ್ಪನವರ ಧ್ವಜ ವಿಷಯ ತೆಗೆದಿದ್ದಾರೆ. ಬಿಜೆಪಿಯವರಿಗೆ ರಾಷ್ಟ್ರ ಧ್ವಜವೂ ಬೇಕು. ಕೇಸರಿ ಧ್ವಜವೂ ಬೇಕು ಎಂದರು.
ಇದೇ ಸಂದರ್ಬದಲ್ಲಿ ಕೇಸರಿ ಧ್ವಜ ಮತ್ತು ರಾಷ್ಟ್ರ ಧ್ವಜವೂ ಅನೇಕ ಕಾರ್ಯಕರ್ತರು ಹಿಡಿದಿದ್ದರು.
ಬಿಜೆಪಿಯ ಪ್ರಮುಖರಾದ ವೀಣಾ ನಾಯಕ್ , ರವಿ ಶೆಟ್ಟಿ ಕುಮ್ರಗೋಡು, ನಳಿನಿ ಪ್ರಧೀಪ್ ರಾವ್, ಸುಧೀರ್ ಕುಮಾರ್ ಶೆಟ್ಟಿ , ರಘುಪತಿ ಬ್ರಹ್ಮಾವರ , ಮೀರಾ ಸದಾನಂದ ಪೂಜಾರಿ, ನಿರಂಜನ ಪೂಜಾರಿ, ದೇವಾನಂದ ನಾಯಕ್ , ಎಸ್ ನಾರಾಯಣ್ ,ರಘುರಾಮ ಶೆಟ್ಟಿ ಬೈಕಾಡಿ, ರಾಜು ಕುಲಾಲ್ , ಉದಯ ಪೂಜಾರಿ , ಗಣೇಶ್ ಕುಲಾಲ್ . ಶೋಭಾ ಪೂಜಾರಿ, ಹರೀಶ್ ಪೂಜಾರಿ ಮಟಪಾಡಿ, ನಿತ್ಯಾನಂದ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.