ಗ್ಯಾರೇಜ್ ಮಾಲಕರ ಸಂಘ ಬ್ರಹ್ಮಾವರ ವಲಯದ ವಾರ್ಷಿಕ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಗ್ಯಾರೇಜ್ ಮಾಲಕರ ಸಂಘ ಬ್ರಹ್ಮಾವರ ವಲಯದ ವಾರ್ಷಿಕ ಮಹಾಸಭೆ ಮತ್ತು ೨೦೨೨- ೨೪ ಪಧಾಧಿಕಾರಿಗಳ ಆಯ್ಕೆ ಶುಕ್ರವಾರ ಸಂಘದ ಕಟ್ಟಡದಲ್ಲಿ ಜರುಗಿತು.
ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಬ್ರಹ್ಮಾವರ , ಕಾರ್ಯದರ್ಶಿ ಪ್ರವೀಣ್ ಚಂದ್ರ ನಾಯಕ್ ,ಖಜಾಂಚಿಯಾಗಿ ರಫಿಕ್ ಬ್ರಹ್ಮಾವರ ಆಯ್ಕೆಗೊಂಡು ಬಳಿಕ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ರಚಿಸಲಾಯಿತು.
ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಹಲವಾರು ಕಾರ್ಯಕ್ರಮವನ್ನು ಹೊಸ ಸಮಿತಿಯು ಹಮ್ಮಿಕೊಂಡಿದ್ದು, ಸಂಘಟನಾತ್ಮಕವಾಗಿ ಸರಕಾರದ ಅನೇಕ ಯೋಜನೆಯನ್ನು ಸಂಘದ ಸದಸ್ಯರಿಗೆ ನೀಡುವ ಉದ್ದೇಶ ಹೊಂದಿದೆ ಎಂದು ಸಂಘಟನೆ ತಿಳಿಸಿದೆ.