ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬ್ರಹ್ಮಾವರ ತಾಲೂಕು, ಗುರ್ಮೆ ಫೌಂಡೇಶನ್ ಕಾಪು, ಜನೌಷಧಿ ಕೇಂದ್ರ ಬ್ರಹ್ಮಾವರ ಮತ್ತು ನಾನಾ ಸಂಘಟನೆ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಮತ್ತು ಅನುಪಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ಜರುಗಿತು.
ಸಾಪಲ್ಯ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸ್ಥಾಪಕಿ ನಿರುಪಮ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮಹಿಳೆಯರು ಸಮಯದ ಹೊಂದಾಣಿಕೆ ಮಾಡಿಕೊಂಡು ಅವರ ಪರಿಸರದ ಅಶಕ್ತರನ್ನು ಗುರುತಿಸಿ ಸಂಘಟಿಸಿ ಸ್ವಾವಲಂಬಿಯನ್ನಾಗಿಸುವ ಕಾರ್ಯ ಮಾಡಿ ಸ್ವತಹ ದುಡಿಯುವ ಕುರಿತು ಮನವರಿಕೆ ಮಾಡ ಬೇಕು ಎಂದರು.
ಅತಿಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬೇರೆ ದೇಶದಲ್ಲಿ ಮಹಿಳೆಯರನ್ನು ಬೋಗದ ವಸ್ತು ಎಂದು ತಿಳಿದರೆ ಭಾರತದಲ್ಲಿ ಪೂಜನೀಯ ಸ್ಥಾನ ನೀಡಿದೆ . ಇಂದು ಶಿಕ್ಷಕ ಮಹಿಳೆಯರನ್ನು ಗೌರವಿಸುವ ಕಾರ್ಯ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ 6 ಶಿಕ್ಷಕಿಯರಿಗೆ ಅನುಪಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶಿಕ್ಷಕರ ಸಂಘದ ಗುರುತು ಪತ್ರ ವಿತರಿಸಲಾಯಿತು.
ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯ್ಕ್ ,ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ , ರಾಜ್ಯ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ , ಉಡುಪಿಯ ಲಯನ್ ಅರುಣ್ ಕುಮಾರ್ ಶೆಟ್ಟಿ ,ಬಿಆರ್ ಸಿ ಅರ್ಚನಾ , ರೇಖಾ , ಜನೌಷಧಿ ಕೇಂದ್ರ ಬ್ರಹ್ಮಾವರ ಸುಂದರ್ ಪೂಜಾರಿ , ಕಿರಣ್ ಕುಮಾರ್ ಹೆಗ್ಡೆ , ಮತ್ತು ಸಂಘದ ಕಾರ್ಯದರ್ಶಿ ರಾಮಚಂದ್ರ ವಾಕುಡ, ಖಜಾಂಚಿ ಗೋಪಾಲ್ ನಾಯ್ಕ್ ಇನ್ನಿತರರು ಪಧಾಧಿಕಾರಿಗಳು ಉಪಸ್ಥಿತರಿದ್ದರು.