ಪಂಜಾಬ್ : 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 59 ಸ್ಥಾನಗಳ ಅಗತ್ಯವಿದ್ದು ,ಇದುವರೆಗಿನ ಮತಎಣಿಕೆ ಪ್ರಕಾರ ಆಮ್ ಆದ್ಮಿ ಪಕ್ಷ 90 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ.ಎಕ್ಸಿಟ್ ಪೊಲ್ ಸಮೀಕ್ಷೆಯಂತೆ ಪಂಜಾಬ್ ನಲ್ಲಿ ಎಎಪಿ ಪಕ್ಷ ಅಧಿಕಾರಕ್ಕೆ ಬಂದಿದೆ.
ಅಮರೀಂದರ್ ಸಿಂಗ್ ಗೆ ಸೋಲು :
Advertisement. Scroll to continue reading.
ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಎಎಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.
ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಾಟಿಯಾಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಥಿಸಿದ್ದರು. ಇವರ ವಿರುದ್ಧ ಎಎಪಿಯ ಅಭ್ಯರ್ಥಿಯಾಗಿ ಅಜಿತ್ ಸಿಂಗ್ ಕೊಹ್ಲಿಯವರು ನಿಂತಿದ್ದರು. ತೀವ್ರ ಹಣಾಹಣಿ ಸ್ಪರ್ಧೆಯಲ್ಲಿ 13 ಸಾವಿರ ಮತಗಳ ಅಂತರದಿಂದ ಎಎಪಿ ಅಭ್ಯರ್ಥಿ ಗೆಲುವು ಕಂಡಿದ್ದಾರೆ.
Advertisement. Scroll to continue reading.