ನವದೆಹಲಿ: ಕರ್ನಾಟಕ ಹೈಕೋರ್ಟ್ ಹಿಜಾಬ್ ಕುರಿತಂತೆ ನೀಡಿದ್ದಂತ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಈ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ವ್ಯಕ್ತ ಪಡಿಸಿದೆ.
ಇಂದು ಸುಪ್ರೀಂ ಕೋರ್ಟ್ ನಲ್ಲಿ ಉಡುಪಿ ಕಾಲೇಜು ವಿದ್ಯಾರ್ಥಿನಿಯರ ಪರ ವಕೀಲ ಸಂಜಯ್ ಹೆಗ್ಡೆ ಹಿಜಾಬ್ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು.
Advertisement. Scroll to continue reading.
ವಿದ್ಯಾರ್ಥಿನಿಯರ ಪರೀಕ್ಷೆಯ ದೃಷ್ಠಿಯಿಂದ ತುರ್ತು ಅರ್ಜಿಯ ವಿಚಾರಣೆ ನಡೆಸುವಂತೆ ಕೋರಿದ್ದರು.
ಈ ಸಂಬಂಧ ಇನ್ನೂ ಇತರೆ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸೋದಕ್ಕೆ ಪರಿಗಣಿಸಲು ಆಗುವುದಿಲ್ಲ. ಹೋಳಿ ಹಬ್ಬದ ರಜೆ ಬಳಿಕ ಅರ್ಜಿ ವಿಚಾರಣೆ ಎಂದು ಸಿಜೆಐ ಎನ್.ವಿ. ರಮಣ ತಿಳಿಸಿದ್ದಾರೆ.
Advertisement. Scroll to continue reading.
In this article:dikscoochiudupi, Diksoochi news, diksoochi Tv, Hijab Row, supreme Court
Click to comment