Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಪ್ರವಾಸೋದ್ಯಮ ಹಾಗೂ ಸಂಜೀವಿನಿ ಕಲಾ ಸಿಂಚನ ಕಾರ್ಯಕ್ರಮ

1

ವರದಿ : ಬಿ.ಎಸ್.ಆಚಾರ್ಯ

ಉಡುಪಿ: ಸಮುದಾಯ ಆಧಾರಿತ ಪ್ರವಾಸೋದ್ಯಮದಲ್ಲಿ ಉಡುಪಿ ಜಿಲ್ಲೆಯ ಸ್ವಸಹಾಯ ಸಂಘದ 20 ಮಹಿಳೆಯರು ಸೇರಿದಂತೆ ಒಟ್ಟು 50 ಮಂದಿಗೆ ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ ಎಂದು ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದ್ದಾರೆ.

ಮಲ್ಪೆ ಪ್ಯಾರಡೈಸ್ ಗ್ರೂಪ್ ಆಫ್ ರೆಸಾರ್ಟ್ಸ್ ಹಾಗೂ ಮಣಿಪಾಲ ವೆಲ್ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿಸ್ಟ್ರೇಷನ್, ಉಡುಪಿ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,
ಸಹಯೋಗದಲ್ಲಿ ರವಿವಾರ ರೆರ್ಸಾಟ್ ನಲ್ಲಿ ಆಯೋಜಿಸಲಾದ ಸಮುದಾಯ ಆಧಾರಿತ ಪ್ರವಾಸೋದ್ಯಮ ಹಾಗೂ ಸಂಜೀವಿನಿ ಕಲಾ ಸಿಂಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

Advertisement. Scroll to continue reading.

ಒಂದು ತಿಂಗಳ ಕಾಲ ಆನ್ಲೈನ್ ಟ್ರೈನಿಂಗ್ ಕೋರ್ಸ್ ಇದಾಗಿದ್ದು, ಇವರೆಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಇಂಗ್ಲಿಷ್ ಸಹಿತ ವಿವಿಧ ಭಾಷಾ ಕೌಶಲ್ಯ, ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತೇಜಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವ ಬಗ್ಗೆ ಹೇಳಿಕೊಡಲಾಗುತ್ತದೆ ಎಂದು ಅವರು ಹೇಳಿದರು.

ಇಲ್ಲಿನ ಬೆಳೆಯಾಗಿರುವ ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆ, ಭತ್ತ ಕಟಾವು, ಅಡಿಕೆ, ತೆಂಗಿನ ತೋಟಗಳಿಗೆ ಪ್ರವಾಸಿಗರನ್ನು ಕರೆದು ಕೊಂಡು ಹೋಗಿ ಅನುಭವದ ಪ್ರವಾಸೋದ್ಯಮದ ಮಾಡಲಾಗುತ್ತದೆ. ಇದರಿಂದ ಜಿಲ್ಲೆಯ ಗ್ರಾಮೀಣ ಜನರ ಆರ್ಥಿಕ ಮಟ್ಟವು ಸುಧಾರಣೆಯಾಗಲಿದೆ. ಈ ಮೂಲಕ ಉಡುಪಿ ಜಿಲ್ಲೆಗೆ ಇನ್ನಷ್ಟು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯ ಮಾಡ ಲಾಗುತ್ತದೆ ಎಂದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಇಲ್ಲಿನ ಕಲೆ ಸಂಸ್ಕೃತಿಯನ್ನು ಪರಿಚಯಿಸಿ ಪ್ರದರ್ಶಿಸುವ ನಿಟ್ಟಿನಲ್ಲಿ ಮನೋರಂಜನೆಯಿಂದ ಬಲವರ್ಧನೆ ಎಂಬ ಧ್ಯೇಯ ದೊಂದಿಗೆ ಮಹಿಳೆಯರ ಏಳು ಕಲಾ ತಂಡಗಳನ್ನು ತಯಾರಿಸಲಾಗಿದೆ. ಈ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಹಾಗೂ ಸಬಲೀಕರಣಗೊಳಿ ಸುವ ಗುರಿಯನ್ನು ಹೊಂದಲಾಗಿದೆಂದು ಡಾ.ನವೀನ್ ಭಟ್ ತಿಳಿಸಿದರು.

ಈ ಕಲಾ ತಂಡಗಳು ಉಡುಪಿಯ ಕರಾವಳಿಯಲ್ಲಿರುವ ರೆಸಾರ್ಟ್ ಹಾಗೂ ಹೊಟೇಲ್ ಗಳಲ್ಲಿ ಪ್ರವಾಸಿಗರಿಗೆ ಇಲ್ಲಿನ ಕಲೆ ಸಂಸ್ಕೃತಿಯ ಪ್ರದರ್ಶನವನ್ನು ನೀಡಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ತಂಡಕ್ಕೆ ನೀಡ ಲಾಗುತ್ತಿದೆ. ಈ ತಂಡಗಳು ಮುಂದೆ ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ತೆರಳಿ ಪ್ರದರ್ಶನ ನೀಡುವಂತಾಗಬೇಕಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಫ್ಲೇಸ್ ಎಕ್ಸ್ಪ್ಲೋರ್ ಲ್ಯಾಬ್ ವೆಬ್ಸೈಟ್ ಮತ್ತು ಆ್ಯಪ್ಗೆ ಚಾಲನೆ ನೀಡಲಾಯಿತು. ಪ್ಲೇಸ್ ಎಕ್ಸ್ಫ್ಲೋರ್ ಲ್ಯಾಬ್ನ ಸಂಸ್ಥಾಪಕಿ ಪ್ರತಿಮಾ, ರೆಡ್ಡಾಟ್ ಫೌಂಡೇಶನ್ನ ಗ್ಲೋಬಲ್ ಅಧ್ಯಕ್ಷೆ ಎಲ್ಸಾಮೇರಿ ಡಿಸಿಲ್ವಾ, ವೆಲ್ ಕಮ್ ಗ್ರೂಪ್ನ ಪ್ರಾಂಶುಪಾಲ ಚೆಫ್ ಕೆ.ತಿರು, ಪ್ಯಾರಡೈಸ್ ಗ್ರೂಪ್ನ ಅಧ್ಯಕ್ಷೆ ಲಲಿತಾ ಮನೋಹರ್, ಎಫ್ಎಸ್ಎಲ್ನ ಅಧ್ಯಕ್ಷ ರಾಕೇಶ್ ಸೋನ್ಸ್, ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ, ಅಭಿಯಾನದ ಜಿಲ್ಲಾ ಕಾರ್ಯ ಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.

ಬಳಿಕ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರಿಂದ ಚಂಡೆ ವಾದನ, ಯಕ್ಷಗಾನ, ಭತ್ತ ಕುಟ್ಟುವ ಹಾಡು, ಸಂಗೀತ ರಸಮಂಜರಿ, ಪಾಡ್ದನ, ಕೋಲಾಟ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!